ಬೈಕ್ ಸೀಜ್ ಮಾಡ್ಬೇಡಿ : ಡಿವೈಎಸ್ ಪಿ ಕಾಲಿಗೆ ಬಿದ್ದ ಮಹಿಳೆ
ಯಾದಗಿರಿ : ಪೊಲೀಸರು ಬೈಕ್ ಸೀಜ್ ಮಾಡಿದ ಹಿನ್ನೆಲೆಯಲ್ಲಿ ಓರ್ವ ಮಹಿಳೆ ಡಿವೈಎಸ್ ಪಿ ಕಾಲಿಗೆ ಬಿದ್ದು ಬೈಕ್ ಸೀಜ್ ಮಾಡದಂತೆ ಕಣ್ಣೀರು ಹಾಕಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿಯಲ್ಲಿ ಸಂಪೂರ್ಣ ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಹೀಗಿದ್ದರೂ ತನ್ನ ಸಂಬಂಧಿ ಜೊತೆಗೆ ಬೈಕ್ ಮೇಲೆ ಬಂದ ಮಹಿಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ.
ಆಗ ಪೊಲೀಸರು ಮಹಿಳೆ ಜೊತೆಗೆ ಬಂದ ವ್ಯಕ್ತಿಯನ್ನು ಮತ್ತು ಬೈಕ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಬೈಕ್ ವಶಕ್ಕೆ ಪಡೆಯುತ್ತಿದ್ದಂತೆ ಕಣ್ಣೀರು ಸುರಿಸಲು ಶುರು ಮಾಡಿದ ಮಹಿಳೆ ಬೈಕ್ ಸೀಜ್ ಮಾಡದಂತೆ ಡಿವೈಎಸ್ಪಿ ಸಂತೋಷ್ ಕಾಲಿಗೆ ಬಿದ್ದಿದ್ದಾಳೆ.
ಇದರಿಂದಾಗಿ ಕೆಂಡಾಮಂಡಲವಾದ ಡಿವೈಎಸ್ಪಿ ಸಂತೋಷ್ ಮಹಿಳೆಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.