Bengaluru: ಮಷೀನ್ ಗೆ ವೇಲ್ ಸಿಲುಕಿ ಯುವತಿ ಸಾವು

1 min read
bengaluru Saaksha Tv

ಮಷೀನ್ ಗೆ ವೇಲ್ ಸಿಲುಕಿ ಯುವತಿ ಸಾವು

ಬೆಂಗಳೂರು: ಪ್ಯಾಕ್ಟ್ರಿಯೊಂದರ ಮಷೀನ್ ಗೆ ಯುವತಿ ವೇಲ್ ಸಲುಕಿಹಾಕೊಂಡು ಯುವತಿ ಸಾವನ್ನಪಿಸರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್‍ನಲ್ಲಿ ನಡೆದಿದೆ.

ಶಾಜಿಯಾ ಬಾನು ಮೃತ ದುರ್ದೈವಿ. ಭಾನುವಾರ ಬೆಳಿಗ್ಗೆ ಬೆಂಗಳೂರಿನ ಚಂದ್ರಾಲೇಔಟ್‍ನ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಘಟನೆ ಸಂಭವಿಸಿದೆ. ಮಷೀನ್ ಗೆ ವೇಲ್ ಸಿಲುಕಿ ಯುವತಿ ಸಾವನ್ನಪ್ಪಿದ್ದಾರೆ.

Bengaluru  Saaksha Tv

ಶಾಜಿಯಾ ಬಾನು ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ  ಮಾಡುತ್ತಿದ್ದರು. ಎಂದಿನಂತೆ ಭಾನುವಾರ ಬೆಳಿಗ್ಗೆ ಎಂದಿನಂತೆ ಯುವತಿ ಕಲೆಸಕ್ಕೆ ಹಾಜರಾಗಿದ್ದರು. ಈ ವೇಳೆ ಮಷೀನ್ ಒಂದಕ್ಕೆ ಶಾಜಿಯಾ ಬಾನು ಅವರ ವೇಲ್ ಸಿಲುಕಿಹಾಕಿಕೊಂಡಿದೆ. ಇದರಿಂದ ಯುವತಿಗೆ ಗಂಭೀರವಾಗಿ ಗಾಯವಾಗಿತ್ತು.

ತಕ್ಷಣ ಫ್ಯಾಕ್ಟರಿ ಸಿಬ್ಬಂದಿ ಶಾಜಿಯಾ ಬಾನು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.ಶಾಜಿಯಾ ಬಾನು ಸಾವಿನ ಹಿನ್ನೆಲೆ ಫ್ಯಾಕ್ಟರಿ ಮಾಲೀಕನ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 ಸಿಬ್ಬಂದಿಗಳು ಫ್ಯಾಕ್ಟರಿ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd