ಕಣ್ಣಿಗೆ ಡ್ರಾಪ್ಸ್ ಬದಲು ನೈಲ್ ಗ್ಲೂ ಹಾಕಿಕೊಂಡ ಮಹಿಳೆ – ಕಣ್ಣು ಉಳಿಸಿದ್ದು ಲೆನ್ಸ್ ..!

1 min read

ಕಣ್ಣಿಗೆ ಡ್ರಾಪ್ಸ್ ಬದಲು ನೈಲ್ ಗ್ಲೂ ಹಾಕಿಕೊಂಡ ಮಹಿಳೆ – ಕಣ್ಣು ಉಳಿಸಿದ್ದು ಲೆನ್ಸ್ ..!

ಅಮೆರಿಕಾ : ಕೆಲ ಬಾರಿ ಯಾವುದೋ ಜ್ಞಾನದಲ್ಲಿ ನಾವು ಅನೇಕ ಎಡವಟ್ಟುಗಳನ್ನ ಮಾಡಿಬಿಡುತ್ತೇವೆ. ಆದ್ರೆ ಕಣ್ಣಿನ ವಿಚಾರ ಅಂತ ಬಂದಾಗ ನಾವು ತುಂಬಾನೆ ಕೇರ್ ಮಾಡಬೇಕಾಗುತ್ತೆ. ಜಾಗೃತರಾಗಿರಬೇಕಾಗುತ್ತೆ. ಆದ್ರೆ ಇಲ್ಲೊಬ್ಬ ಮಹಿಳೆ ನಿರ್ಲಕ್ಷ್ಯದಿಂದಾಗಿ ಕಣ್ಣೇ ಕಳೆದುಕೊಳ್ಳಬೇಕಾಗಿತ್ತು. ಆದ್ರೆ ಅದೃಷ್ಟ ಚನಾಗಿತ್ತು ಅನ್ಸುತ್ತೆ. ಅದಕ್ಕೆ ಕಣ್ಣಿನ ರೆಪ್ಪೆಗಳು ಸಂಪೂರ್ಣವಾಗಿ ಉದುರಿ ಹೋದ್ರೂ ಕಣ್ಣುಗಳ ದೃಷ್ಟಿ ಹೋಗಿಲ್ಲ.

ಅಂದ್ಹಾಗೆ ಅಮೆರಿಕದ ಮಿಚಿಗನ್ ಮೂಲದ ಯಾಕೆಡ್ರಾ ವಿಲಿಯಮ್ಸ್ ಈ ರೀತಿ ಎಡವಟ್ಟು ಮಾಡಿಕೊಂಡು ಪರದಾಡಿದ ಮಹಿಳೆ.ಆಕೆ ಲೆನ್ಸ್ ಬಳಕೆ ಮಾಡುತ್ತಿದ್ದು, ಏಪ್ರಿಲ್ 15ರ ರಾತ್ರಿ ಲೆನ್ಸ್ ಹಾಕಿಕೊಂಡೇ ಮಲಗಿದ್ದಳಂತೆ. ರಾತ್ರಿ 1 ಗಂಟೆಯ ಹೊತ್ತಿಗೆ ಲೆನ್ಸ್ ತೆಗೆಯಬೇಕೆನಿಸಿ, ಎದ್ದು ಲೆನ್ಸ್ ತೆಗೆಯಲು ಮುಂದಾಗಿದ್ದಾಳೆ. ಪರ್ಸ್ನಲ್ಲಿದ್ದ ಐ ಡ್ರಾಪ್ ತೆಗೆಯಲು ಕೈ ಹಾಕಿದ್ದಾಳೆ. ಆಗ ಆಕೆಗೆ ಐ ಡ್ರಾಪ್ ಬಾಟೆಲ್ ಗಾತ್ರದ್ದೇ ಆಗಿದ್ದ ನೈಲ್ ಗ್ಲ್ಯೂ ಸಿಕ್ಕಿದೆ. ಅದನ್ನು ಕಣ್ಣಿಗೆ ಹಾಕಿಕೊಂಡಿದ್ದಾಳೆ.

ನೈಲ್ ಗ್ಲೂ ಕಣ್ಣಿಗೆ ಬಿದ್ದ ತಕ್ಷಣ ಕಣ್ಣು ನೋವು ಮತ್ತು ತುರಿಕೆ ಶುರುವಾಗಿದೆ. ತಕ್ಷಣ ತಾನು ಮಾಡಿದ ತಪ್ಪೇನೆಂದು ಆಕೆಯ ಅರಿವಿಗೆ ಬಂದಿದೆ. ಕಣ್ಣು ಬಿಡದಂತೆ ರೆಪ್ಪೆಗಳು ಅಂಟಿಕೊಂಡಿವೆ. ಗಂಡನನ್ನು ಕೂಗಿ ಕರೆದು ಆಯಂಬುಲೆನ್ಸ್ಗೆ ಕರೆ ಮಾಡಲು ಹೇಳಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯಲ್ಲಿ ವೈದ್ಯರು ಸತತ ಎರಡು ಗಂಟೆ ಪ್ರಯತ್ನ ಮಾಡಿ ಆಕೆ ಕಣ್ಣು ತೆರೆಯುವಂತೆ ಮಾಡಿದ್ದಾರೆ. ಕಣ್ಣಿನಲ್ಲಿ ಲೆನ್ಸ್ ಇದ್ದ ಕಾರಣದಿಂದಾಗಿ ಆಕೆಯ ಕಣ್ಣು ಉಳಿದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆಕೆಯ ರೆಪ್ಪೆಯ ಕೂದಲು ಸಂಪೂರ್ಣವಾಗಿ ಉದುರಲಿದೆ ಎಂದೂ ಅವರು ತಿಳಿಸಿದ್ದಾರೆ.

ಉಚಿತ ಕೊರೊನಾ ಲಸಿಕೆ ಯಾಕೆ ಕೊಡೋಕೆ ಆಗಲ್ಲ..?

ಸೋಮವಾರ ಸಂಪುಟ ಸಭೆ : ರಾಜ್ಯದಲ್ಲಿ ಇನ್ನಷ್ಟು ಕಠಿಣ ನಿಯಮ

ಉತ್ತರಾಖಂಡ್ ನಲ್ಲಿ ಮತ್ತೊಮ್ಮೆ ಹಿಮಸ್ಫೋಟ : 8ಕ್ಕಿಂತ ಅಧಿಕ ಮಂದಿ ಸಾವು – 438 ಜನರ ರಕ್ಷಣೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd