ಕೋಲಾರ: ಕ್ಯಾನ್ಸರ್ ಗೆ ಮಹಿಳಾ ಪಿಎಸ್ ಐ ಬಲಿಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯ ಮಹಿಳಾ ಪಿಎಸ್ ಐ ಗಾಯತ್ರಿ(51) ಎಂಬುವವರು ಕ್ಯಾನ್ಸರ್ ಕಾಯಿಲೆಗೆ ಬಲಿಯಾಗಿದ್ದಾರೆ.
ಗಾಯತ್ರಿ ಅವರು ಕಳೆದ 30 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಮೃತ ಗಾಯತ್ರಿ ಅವರು ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆಯಲ್ಲಿ ನಿವಾಸಿಯಾಗಿದ್ದಾರೆ. ಇನ್ನೂ 9 ವರ್ಷಗಳ ಸೇವಾವಧಿ ಇತ್ತು. ಆದರೆ, ಅಷ್ಟರಲ್ಲಿಯೇ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.
ಕೆಜಿಎಫ್ ಎಸ್ಪಿ ಶಾಂತರಾಜು, ಡಿವೈಎಸ್ಪಿ ಪಾಂಡುರಂಗ ಸೇರಿದಂತೆ ಕೆಜಿಎಫ್ ಪೊಲೀಸರಿಂದ ಸಂತಾಪ ಸೂಚಿಸಿದ್ದಾರೆ.