ಕೇಳಿದಾಗ ಸಾಲ ಕೊಡಲಿಲ್ಲವೆಂದು ಸುಳ್ಳು ರೇಪ್ ಕೇಸ್ ದಾಖಲಿಸಿದ ಮಹಿಳೆ.
ಮಹಿಳೆಯರ ರಕ್ಷಣೆಗಾಗಿ ಸರಕಾರವು ಮಹಿಳ ಪರವಾದ ಕಠಿಣ ಕಾನೂನುಗಳನ್ನ ಜಾರಿ ಗೊಳಿಸುತ್ತಿದೆ. ಆದರೇ ಇದನ್ನ ಕೆಲವೊಮ್ಮೆ ದುರ್ಬಳಕೆ ಮಾಡಿಕೊಂಡು ಸುಳ್ಳು ಕೇಸ್ ಗಳನ್ನ ದಾಖಲಿಸುತ್ತಿದ್ದಾರೆ. ಕೇಳಿದಾಗ ಸಾಲ ಕೊಡಲಿಲ್ಲ ಎನ್ನುವ ಕಾರಣಕ್ಕೆ ನೆರಹೊರೆಯ ವ್ಯಕ್ತಿಯ ಮೇಲೆ 30 ವರ್ಷದ ಮಹಿಳೆ ಅತ್ಯಾಚಾರದ ಕೇಸನ್ನ ಹಾಕಿದ್ದಾಳೆ.
ಕೇಸ್ ದಾಖಲಿಸಿಕೊಂಡ ಪೊಲೀಸರಿಗೆ ತನಿಖೆ ನಡೆಸಿದಾಗ ಇದೊಂದು ಸುಳ್ಳು ಆರೋಪ ಎಂದು ಗೊತ್ತಾಗಿದೆ. ಮಹಿಳೆಯನ್ನ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದಾಗ ಅಸಲಿ ನಿಜ ಬೆಳಕಿಗೆ ಬಂದಿದೆ.
ಮಹಿಳೆ ನೆರೆಹೊರೆಯವರ ಬಳಿ 10,000 ಸಾಲವನ್ನ ಕೇಳಿದ್ದಳು ಇದಕ್ಕೆ ನೆರೆಹೊರೆಯವರು ನಿರಾಕರಿಸಿದರು ಎನ್ನುವ ಕಾರಣಕ್ಕೆ ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿದ್ದಾಳೆ.
ಇದೀಗ ಸುಳ್ಳು ದೂರು ದಾಖಲಿಸಿದ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದು, ಕಾನೂನು ತಜ್ಞರ ಬಳಿ ಸಲಹೆ ಕೇಳಲಾಗಿದೆ.