ಅಣ್ಣನ ಪ್ರತಿಮೆಗೆ ರಾಖಿ ಕಟ್ಟಿದ ತಂಗಿ
ಸಹೋದರಿಯೊಬ್ಬಳು ತನ್ನ ಸಹೋದರ ಪ್ರತಿಮೆಗೆ ರಾಖಿ ಕಟ್ಟುತ್ತಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಚಿತ್ರದಲ್ಲಿ ದೇಶಕ್ಕಾಗಿ ಹೋರಾಡಿ ಹುತಾತ್ಮನಾದ ಸೈನಿಕನ ಪ್ರತಿಮೆಯನ್ನು ರಾಜಸ್ಥಾನದ ಊರೊಂದರಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಪ್ರತಿಮೆಗೆ ಆತನ ಸಹೋದರಿ ರಾಖಿ ಕಟ್ಟಿದ್ದಾಳೆ.
ಈ ಫೋಟೋವನ್ನು ಬಿರ್ಲಾ ಪ್ರಿಸಿಷನ್ ಟೆಕ್ನಾಲಜೀಸ್ ಲಿಮಿಟೆಡ್ ನ ಚೇರ್ ಮನ್ ವೇದಾಂತ್ ಬಿರ್ಲಾ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

ಇನ್ನು ಈ ಫೋಟೋವನ್ನು ಹಂಚಿಕೊಂಡಿರುವ ಬಿರ್ಲಾ ಅವರು, ಆಕೆ ರಾಖಿ ಕಟ್ಟಿರಬಹುದು, ಆದ್ರೆ ಆತ ಮಾತನಾಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಈ ಪ್ರತಿಮೆಯು ಶಹೀದ್ ಗಣಪತ್ ರಾಮ್ ಕಡ್ವಾಸ್ರಾ ಅವರದ್ದಾಗಿದೆ. ಐದು ವರ್ಷಗಳ ಹಿಂದೆ ಶಹೀದ್ ಗಣಪತ್ ಅವರು ಹುತಾತ್ಮರಾಗಿದ್ದರು.
ಸದ್ಯ ಶಹೀದ್ ಗಣಪತ್ ಅವರ ಪ್ರತಿಮೆಗೆ ರಾಖಿ ಕಟ್ಟುತ್ತಿರುವ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಫೋಟೋ 2017ರಲ್ಲಿ ಕ್ಲಿಕ್ಕಿಸಿದ್ದಾಗಿದೆ.