Women Asia Cup 2022 – ಥಾಯ್ಲೆಂಡ್ ಮಣಿಸಿ ಫೈನಲ್ ಗೇರಿದ ಭಾರತ…
ಗುರುವಾರ ನಡೆದ ಮಹಿಳಾ ಏಷ್ಯಾಕಪ್‌ನ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್ ತಂಡವನ್ನು 74 ರನ್‌ಗಳಿಂದ ಸೋಲಿಸಿದ ಭಾರತ ಫೈನಲ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಭಾರತ ವನಿತೆಯರ ತಂಡ ಎಂಟನೇ ಬಾರಿಗೆ ಏಷ್ಯಾಕಪ್ ನಲ್ಲಿ ಫೈನಲ್ ಪ್ರವೇಶಿಸಿದೆ. ಇದಕ್ಕೂ ಮುನ್ನ 7 ಬಾರಿ ಫೈನಲ್ ತಲುಪಿ 6 ಬಾರಿ ಪ್ರಶಸ್ತಿ ಗೆದ್ದ ದಾಖಲೆ ಹೊಂದಿದೆ.
ಥಾಯ್ಲೆಂಡ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಥಾಯ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಲಷ್ಟೇ ಶಕ್ತವಾಯಿತು. ಶೆಫಾಲಿ ವರ್ಮಾ ಪಂದ್ಯ ಶ್ರೇಷ್ಠ ಆಟವಾಡಿದರು.
ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಸ್ಮೃತಿ ಮಂಧಾನ ಜೊತೆಗೂಡಿ ಮೊದಲ ವಿಕೆಟ್‌ಗೆ 38 ರನ್ ಗಳಿಸಿದರು. ಮಂಧಾನ 4.2 ಓವರ್‌ಗಳಲ್ಲಿ 13 ರನ್ ಗಳಿಸಿ ಔಟಾದರು. ಅದೇ ಹೊತ್ತಿಗೆ ಪವರ್ ಪ್ಲೇನಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತ್ತು. ಬಿರುಸಿನ ಬ್ಯಾಟಿಂಗ್ ಅಡಿದ ಶೆಫಾಲಿ 28 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಾಯದಿಂದ 42 ರನ್ ಗಳಿಸಿದರು. ಮತ್ತೊಂದೆಡೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 30 ಎಸೆತಗಳಲ್ಲಿ 36 ರನ್ ಗಳಿಸಿದರು.
ಥಾಯ್ಲೆಂಡ್ ಪರವಾಗಿ ನಟಾಯಾ ಬೌಚಾಥಮ್ 4 ಓವರ್ ಗಳಲ್ಲಿ 31 ರನ್ ನೀಡಿ 1 ವಿಕೆಟ್ ಪಡೆದರು. ಫನಿತಾ ಮಾಯಾ 1 ಓವರ್ ನಲ್ಲಿ 12 ರನ್ ನೀಡಿ 1 ವಿಕೆಟ್ ಪಡೆದರು.
ಥಾಯ್ಲೆಂಡ್‌ಗೆ ಕಳಪೆ ಆರಂಭ
149 ರನ್‌ಗಳ ಗುರಿ ಬೆನ್ನತ್ತಿದ ಥಾಯ್ಲೆಂಡ್ ತಂಡ ಕಳಪೆ ಆರಂಭ ಕಂಡಿತು. 26 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳು ಪತನಗೊಂಡಿದ್ದವು. 7 ರನ್ ಗಳಿಸಿದ್ದಾಗ ಆರಂಭಿಕ ಆಟಗಾರ್ತಿ ನನ್ಪತ್ ಕೊಂಚರೊಯೆಂಕಿ ದೀಪ್ತಿ ಶರ್ಮಾ ಎಸೆತದಲ್ಲಿ ಶೆಫಾಲಿ ವರ್ಮಾಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು. ನನ್ಪತ್ 10 ಎಸೆತಗಳಲ್ಲಿ 5 ರನ್ ಗಳಿಸಿದರು. ಎರಡನೇ ಓಪನರ್ ನಾಥಕನ್ ಚಂತಮ್ ಕೂಡ 9 ಎಸೆತಗಳಲ್ಲಿ 7 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಭಾರತದ ಪರ ದೀಪ್ತಿ ಶರ್ಮಾ 4 ಓವರ್‌ಗಳಲ್ಲಿ 7 ರನ್ ನೀಡಿ 3 ವಿಕೆಟ್ ಪಡೆದರು. ರಾಜೇಶ್ವರಿ ಗೇವಾಡ್ 4 ಓವರ್‌ಗಳಲ್ಲಿ 10 ರನ್ ನೀಡಿ 2 ವಿಕೆಟ್ ಪಡೆದರು.
Women Asia Cup 2022: India Vs Thailand 1st Semi Final Update; Women Asia Cup 2022






