ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಕೊರೊನಾ ಹಾವಳಿ ಮುಂದುವರೆದಿದೆ. ಜಿಲ್ಲೆಯಲ್ಲಿ ಇಂದು ಕೊರೊನಾ ಮಹಾಮಾರಿಯಿಂದಾಗಿ ಓರ್ವ ಮಹಿಳೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇಂದು ಒಟ್ಟು 33 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಚಾಮರಾಜನಗರ ಸಮೀಪದ ಜಾಲಹಳ್ಳಿ ಹುಂಡಿ ಗ್ರಾಮದ 48 ವರ್ಷದ ಮಹಿಳೆ ಕೊರೊನಾ ಮಹಾಮಾರಿಯಿಂದಾಗಿ ಮೃತಪಟ್ಟಿದ್ದಾರೆ. ಇನ್ನೂ ಇಂದು ಒಟ್ಟು 37 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ 6ಕ್ಕೇರಿದೆ. ಮೃತ ಮಹಿಳೆಯ ಅಂತ್ಯಕ್ರಿಯೆಯನ್ನು ನಗರದ ಹೊರ ವಲಯದ ನಿಗದಿತ ಜಾಗದಲ್ಲಿ ನೆರವೇರಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 624ಕ್ಕೇರಿದೆ. ಇಲ್ಲಿಯ ವರೆಗೂ 406 ಮಂದಿ ಗುಣಮುಖರಾಗಿದ್ದಾರೆ. ಇನ್ನೂ 211 ಸಕ್ರಿಯ ಕೇಸ್ ಗಳಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದು ಜಿಲ್ಲೆಯ ಜನರ ಆತಂಕವನ್ನು ಹೆಚ್ಚಿಸಿದೆ.
ವಿಕಲಚೇತನರ ಗೌರವಧನ ತಡೆ ಅಮಾನವೀಯ ಎಂದ ಪ್ರತಿಪಕ್ಷದ ನಾಯಕ ಅಶೋಕ್ ಆಕ್ರೋಶ
ತಕ್ಷಣ ಗೌರವಧನ ಬಿಡುಗಡೆಗೆ ಆಗ್ರಹ; ಆಂಧ್ರ ಮಾದರಿಯಲ್ಲಿ 5 ಸಾವಿರಕ್ಕೆ ಹೆಚ್ಚಿಸಿ ಎಂದು ಒತ್ತಾಯ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರ ಸೇವಾ ಭದ್ರತೆಗೆ ಆಗ್ರಹಿಸಿ ಅಶೋಕ...








