ಬೆಂಗಳೂರು : ಬ್ರಿಗೇಡ್ ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್ ಮೇಲಿಂದ ಯುವತಿಯೊಬ್ಬಳು ಆಯತಪ್ಪಿ ಬಿದ್ದು ಜೀವ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ..
ಫುಡ್‍ಕೋರ್ಟ್‍ನಲ್ಲಿ ಊಟ ಮುಗಿಸಿ 5ನೇ ಮಹಡಿಯಿಂದ ಮೆಟ್ಟಿಳಿಯುವಾಗ ಯುವತಿ ಆಯತಪ್ಪಿ ಕೆಳಗೆ ಬಿದ್ದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.. ಆಕೆಯ ಜೊತೆಗಿದ್ದ ಆಕೆಯ ಸ್ನೇಹಿತ ಪೀಟರ್ ಸಹ ಕೆಳಗೆ ಬಿದ್ದಿದ್ದು , ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ..
ಘಟನೆಯಲ್ಲಿ ಮೃತಪಟ್ಟ ಯುವತಿಯನ್ನ ಲಿಯಾ ಎಂದು ಗುರುತಿಸಲಾಗಿದೆ.. ಪೀಟರ್ ಗಾಯಾಳುವಾಗಿದ್ದಾನೆ..
ಮೃತಪಟ್ಟ ಯುವತಿಯ ರಕ್ತದ ಮಾದರಿಯನ್ನು ಎಫ್‍ಎಸ್‍ಎಲ್‍ಗೆ ರವಾನೆ ಮಾಡಲಾಗಿದೆ. ಮಾಲ್ ನಲ್ಲೂ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಯುವಕ ಯುವತಿ ಜೊತೆ ಬಂದಿದ್ದ ಸ್ನೇಹಿತರಿಂದಲೇ ಮಾಹಿತಿ ಕಲೆ ಹಾಕಿದ್ದಾರೆ.
ಘಟನೆ ಸಂಬಂಧ ಮೃತ ಯುವತಿ ಲಿಯಾ ತಾಯಿ ಆಕಸ್ಮಿಕ ಸಾವು ಎಂದು ದೂರು ನೀಡಿದ್ದಾರೆ.