ಬೀದರ್: ಬಸ್ ಸೀಟಿಗಾಗಿ (Bus Seat) ಮಹಿಳೆಯರಿಬ್ಬರು ಚಪ್ಪಲಿಯಿಂದ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೀದರ್ ನಲ್ಲಿ ನಡೆದಿದೆ. ಈ ಬಸ್ ಬೀದರ್ ನಿಂದ ಕಲಬುರಗಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಶಕ್ತಿ ಯೋಜನೆ (Shakti Scheme) ಅಡಿ ಉಚಿತ ಟಿಕೆಟ್ (Free Ticket) ಪಡೆದ ಬಳಿಕ ಮಹಿಳೆಯರು ಕಿತ್ತಾಟ ನಡೆಸಿದ್ದಾರೆ. ಓರ್ವ ಮಹಿಳೆ, “ಸೀಟು ಬಿಡು, ಇದು ನನ್ನದು” ಎಂದು ಹೇಳಿದ್ದರೆ ಮತ್ತೊಬ್ಬಳು, “ನಾನು ಸೀಟ್ ಬಿಡಲ್ಲ. ಏನ್ ಮಾಡ್ತೀಯಾ ಎಂದು ಪ್ರಶ್ನಿಸಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ಜೋರಾಗುತ್ತಿದ್ದಂತೆ ಓರ್ವ ಮಹಿಳೆ ತನ್ನ ಚಪ್ಪಲಿ ತೆಗೆದು ಜಗಳ ಮಾಡುತ್ತಿದ್ದ ಮಹಿಳೆ ಹೊಡೆದಿದ್ದಾಳೆ. ಬಟ್ಟೆ ಹಿಡಿದು ಮಹಿಳೆಯರು ಕಿತ್ತಾಟ ನಡೆಸಿಕೊಂಡಿದ್ದಾರೆ.