‘KFC’ಯಲ್ಲಿ ಕೇಳಿದ್ದು ಚಿಕನ್ ವಿಂಗ್ಸ್ ಬಂದಿದ್ದು ಕೋಳಿ ತಲೆ..!!!
ಲಂಡನ್ : ಫುಡ್ ಡೆಇಲವರಿ ಮಾಡಿದಾಗ ಅದ್ರಲ್ಲಿ , ಪ್ಲಾಸ್ಟಿಕ್ , ಪೇಪರ್ ಬಂದಿರುವುದು , ಅಷ್ಟಕ್ಕೂ ನೀರಿ ಫ್ರೈಡ್ ಚಿಕನ್ ಆರ್ಡರ್ ಮಾಡಿದ್ದಾಗ ಟವೆಲ್ ಫ್ರೈ ಬಂದಿದ್ದು , ಹೋಟೆಲ್ ನಲ್ಲಿ ಆರ್ಡರ್ ಮಾಡಿದ್ದೇ ಒಂದಾದ್ರೆ ಬರೋದೆ ಇನ್ನೊಂದು ಈ ರೀತಿ ಸಾಕಷ್ಟು ಘಟನೆಗಳು ನಡೆಯುತ್ತಲೇ ಇರುತ್ವೆ..
ಆದ್ರೆ ಇಲ್ಲೊಬ್ಬ ಗ್ರಾಹಕರು KFCಯಲ್ಲಿ ಚಿಕನ್ ಹಾಟ್ ವಿಂಗ್ಸ್ ಆರ್ಡರ್ ಮಾಡಿದ್ದಾಗ , ಅವರಿಗೆ ಹಾಟ್ ವಿಂಗ್ಸ್ ಬಾಕ್ಸ್ ನಲ್ಲಿ ಕೋಳಿ ತಲೆ ಸಿಕ್ಕಿದೆ.. ಇದನ್ನ ಕಂಡು ಶಾಕ್ ಆಗಿದ್ದ ಮಹಿಳೆಯು ಇದರ ಫೋಟೋ ಕ್ಲಿಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.. ನೆಟ್ಟಿಗರು ಕೂಡ ಪೋಸ್ಟ್ ನೋಡಿ ಶಾಕ್ ಆಗಿದ್ದು, ಕೆಲವರು ತಮಾಷೆಯಾಗಿ ಕಾಮೆಂಟ್ ಗಳನ್ನ ಮಾಡ್ತಾಯಿದ್ದಾರೆ..
https://www.instagram.com/p/CXtnmZco_8s/?utm_source=ig_embed&ig_rid=738c2e21-ef99-49de-9f27-165793eafdb1
ಗೇಬ್ರಿಯಲ್ ಎಂಬ ಮಹಿಳೆ ಲಂಡನ್‍ನ ಟ್ವಿಕನ್ ಹ್ಯಾಮ್‍ನಲ್ಲಿರುವ ಕೆಎಫ್‍ಸಿ ಫೆಲ್ತಮ್‍ನಿಂದ ಚಿಕನ್ ಹಾಟ್ ವಿಂಗ್ಸ್ ಆರ್ಡರ್ ಮಾಡಿದ್ದರು. ಈ ಹಾಟ್ ವಿಂಗ್ಸ್ ಬಾಕ್ಸ್‌ನಲ್ಲಿರುವ ಚಿಕನ್ ತಿನ್ನುವ ವೇಳೆ ಅವರಿಗೆ ಕೋಳಿ ತಲೆ ಕಂಡುಬಂದಿದೆ. ಆಗ ಅದನ್ನು ಕಂಡು ಉಳಿದ ಚಿಕನ್ ಸಹ ಸೇವಿಸಲು ಸಾಧ್ಯವಾಗದೇ ಎಸೆದಿದ್ದಾರೆ. ಎಸೆಯುವ ಮುನ್ನ ಅದರ ಫೋಟೋಗಳನ್ನ ಕ್ಲಿಕ್ಕಿಸಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫೋಟೋದಲ್ಲಿ ಕೊಕ್ಕನ್ನು ಸಹ ಕತ್ತರಿಸದೇ ಇಡೀ ತಲೆಯನ್ನು ಬೇಯಿಸಿ ಹಾಗೆಯೇ ನೀಡಿರುವುದನ್ನು ಕಾಣಬಹುದಾಗಿದೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಸಂಬಂಧ KFC ತನ್ನ ಅಧಿಕೃತ ಟ್ವಿಟ್ಟರ್ ಗೆ ಟ್ಯಾಗ್ ಮಾಡಲಾಗಿದ್ದ ಈ ಫೋಟೋ ನೋಡಿ ನಾವು ಸಹ ಶಾಕ್ ಆಗಿದ್ದೇವೆ. ಇದು ಹೇಗೆ ಸಂಭವಿಸಿತು ಎಂಬುವುದರ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಸರಳವಾಗಿ ಹೇಳುವುದಾದರೆ ನಾವು ಗ್ರಾಹಕರಿಗೆ ನಿಜವಾದ ಚಿಕನ್ ಅನ್ನು ಒದಗಿಸುತ್ತೇವೆ ಮತ್ತು ಈ ವಿಚಾರದ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ನಮ್ಮ ರೆಸ್ಟೋರೆಂಟ್ ಸಿಬ್ಬಂದಿಯ ಅಜಾಗರೂಕತೆಯಿಂದ ಈ ಘಟನೆ ನಡೆದಿರಬಹುದು. ಹಾಗಾಗಿ ಅವರು ಯಾರೆಂದು ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದೆ.








