Women’s Asia Cup 2022: ಶ್ರೀಲಂಕಾಗೆ 150 ರನ್ ಟಾರ್ಗೆಟ್ ನಿಡಿದ ಭಾರತ…
ಮಹಿಳಾ ಏಷ್ಯಾಕಪ್ 2022: ಇಂದಿನಿಂದ ಆರಂಭವಾಗಿರುವ ಮಹಿಳಾ ಏಷ್ಯಾಕಪ್ ನಲ್ಲಿ ಭಾರತ ತಂಡ ಶ್ರೀಲಂಕಾಗೆ 151 ರನ್‌ಗಳ ಟಾರ್ಗೆಟ್ ನೀಡಿದೆ. ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು.
ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಬ್ಯಾಟಿಂಗ್ ನಲ್ಲಿ ವಿಫಲರಾಗಿದ್ದಾರೆ. ಮಂಧಾನ 7 ಎಸೆತಗಳಲ್ಲಿ 6 ರನ್ ಗಳಿಸಿ ಔಟಾದರು. ಶೆಫಾಲಿ ವರ್ಮಾ ಅವರ ಬ್ಯಾಟ್ ನಿಂದ 11 ಎಸೆತಗಳಲ್ಲಿ ಕೇವಲ 10 ರನ್ ಬಂದಿವೆ. ಗಾಯದಿಂದ ಕಮ್ ಬ್ಯಾಕ್ ಮಾಡಿದ ಜೆಮಿಮಾ ರೋಡ್ರಿಗಸ್ 53 ಎಸೆತಗಳಲ್ಲಿ 76 ರನ್ ಗಳಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದ 11 ಬೌಂಡರಿ ಹಾಗೂ 1 ಸಿಕ್ಸರ್‌ಗಳು ಸಿಡಿದವು. ಇದರ ಹೊರತಾಗಿ, ನಾಯಕಿ ಹರ್ಮನ್‌ಪ್ರೀತ್ ಕೌರ್ 30 ಎಸೆತಗಳಲ್ಲಿ 33 ರನ್ ಗಳಿಸಿದರು.
ಶ್ರೀಲಂಕಾ ಪರ ಒಶಾದಿ ರಣಸಿಂಘೆ ಗರಿಷ್ಠ 3 ವಿಕೆಟ್ ಪಡೆದರೆ, ಸುಗಂಧಾ ಕುಮಾರಿ ಹಾಗೂ ಚಾಮರಿ ಅಟಪಟ್ಟು ತಲಾ ಒಂದು ವಿಕೆಟ್ ಬಾಚಿಕೊಂಡರು.
ಭಾರತ: ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ಸಿ), ದಯಾಲನ್ ಹೇಮಲತಾ, ದೀಪ್ತಿ ಶರ್ಮಾ, ಸ್ನೇಹ ರಾಣಾ, ರಿಚಾ ಘೋಷ್ (ವಾಕ್), ಪೂಜಾ ವಸ್ತ್ರಾಕರ್, ರಾಧಾ ಯಾದವ್, ರೇಣುಕಾ ಸಿಂಗ್.
ಶ್ರೀಲಂಕಾ: ಹಾಸಿನಿ ಪೆರೇರಾ, ಚಾಮರಿ ಅಟ್ಟಪಟ್ಟು ( ಸಿ) ), ಹರ್ಷಿತಾ ಮದ್ವಿ, ಅನೌಷ್ಕಾ ಸಂಜೀವನಿ (ವಾಕ್), ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಮಲ್ಶಾ ಶೆಹಾನಿ, ಓಷಾದಿ ರಣಸಿಂಗ್, ಸುಗಂಧಿಕಾ ಕುಮಾರಿ, ಇನೋಕಾ ರಣವೀರಾ, ಅಚಿನಿ ಕುಲಸೂರಿಯಾ.
Women’s Asia Cup 2022: India Vs Sri Lanka T20 LIVE Score Updates; Women’s Asia Cup T20 2022 | IN W Vs SL W