Women’s Asia Cup 2022: ಭಾರತ ಶ್ರೀಲಂಕಾ ನಡುವೆ ಇಂದು ಮೊದಲ ಹಣಾಹಣಿ…
ಐಸಿಸಿ ಮಹಿಳಾ ಏಷ್ಯಾ ಕಪ್ 2022 ಇಂದಿನಿಂದ ಆರಂಭವಾಗುತ್ತಿದೆ. ಏಷ್ಯಾ ಕಪ್ ಪುರುಷರ ಕ್ರಿಕೆಟ್ ನಲ್ಲಿ ಟೀ ಇಂಡಿಯಾ ನಿರಾಸೆ ಅಣುಭವಿಸಿದ ನಂತರ ಮತ್ತೆ ಮೆಗಾ ಈವೆಂಟ್ ನಡೆಯುತ್ತಿದ್ದು ಈ ಭಾರಿ ಮಹಿಳೆರು ಕಣಕ್ಕಿಳಿದಿದ್ದಾರೆ.
ಇಂದು ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲ ಪಂದ್ಯ ಬಾಂಗ್ಲಾದೇಶದ ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ..
ಬಾಂಗ್ಲಾದೇಶ ಈ ವರ್ಷದ ಮಹಿಳಾ ಏಷ್ಯಾ ಕಪ್‌ನ ಆತಿಥ್ಯ ವಹಿಸಿದೆ. ಟೂರ್ನಿಯ ಎಲ್ಲಾ ಪಂದ್ಯಗಳು ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.
ಈ ಬಾರಿಯ ಮಹಿಳಾ ಏಷ್ಯಾಕಪ್ ನಲ್ಲಿ ಭಾರತ, ಪಾಕಿಸ್ತಾನ, ಥಾಯ್ಲೆಂಡ್, ಶ್ರೀಲಂಕಾ, ಮಲೇಷ್ಯಾ, ಯುಎಇ ಹಾಗೂ ಆತಿಥೇಯ ಬಾಂಗ್ಲಾದೇಶ ಸೇರಿದಂತೆ ಒಟ್ಟು 7 ತಂಡಗಳು ಏಷ್ಯಾಕಪ್ ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ. ಟೂರ್ನಿಯು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ತಂಡಗಳು ಯಾವುದೇ ಗುಂಪಿನಲ್ಲಿ ಇರುವುದಿಲ್ಲ. ತಂಡಗಳ ಸೋಲು-ಗೆಲುವನ್ನು ಗಮನದಲ್ಲಿಟ್ಟುಕೊಂಡು ಅಗ್ರ-4 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. 4 ತಂಡಗಳು ಸೆಮಿಫೈನಲ್‌ನಲ್ಲಿ ಆಡಲಿವೆ.
ಇಂದಿನಿಂದ ಮೊದಲ ಪಂದ್ಯ ಶುರುವಾಗುತ್ತಿದ್ದು, ಶ್ರೀಲಂಕಾ ವಿರುದ್ಧ ಭಾರತದ ಮೊದಲ ಪಂದ್ಯವನ್ನ ಆಡುತ್ತಿದೆ. ಇಲ್ಲಿಯವರೆಗೆ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತವು ಟಿ20 ಮಾದರಿಯಲ್ಲಿ ಎರಡು ಏಷ್ಯಾಕಪ್ ಪಂದ್ಯಾವಳಿಗಳನ್ನು ಮತ್ತು 50 ಓವರ್ ಮಾದರಿಯಲ್ಲಿ ಎಲ್ಲಾ ನಾಲ್ಕು ಏಷ್ಯಾಕಪ್ ಟೂರ್ನಿಗಳನ್ನು ಗೆದ್ದಿದೆ.
Women’s Cricket Asia Cup 2022 Schedule Update; India Pakistan Match On 7 October