ADVERTISEMENT
Saturday, April 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹೆಣ್ಣು ಸಂಸಾರದ ‌ಕಣ್ಣು

admin by admin
March 8, 2020
in Newsbeat
Share on FacebookShare on TwitterShare on WhatsappShare on Telegram

ಎಂದಿನಂತೆ ಇಂದು ಒಂದು ಕೈನಲ್ಲಿ ಕಾಫಿ ಕಪ್ ಹಿಡಿದು ಕೊಂಡು ಇನ್ನೊಂದು ಕೈನಲ್ಲಿ ದಿನಪತ್ರಿಕೆಯ ಪುಟಗಳನ್ನು ತಿರುವುತ್ತಾ ಅಂದಿನ ಸುದ್ದಿಯ ಕಡೆ ಕಣ್ಣಾಡಿಸಿದೆ. ಆಗ ನೆನಪಿಗೆ ಬಂತು ಓ.. ಇಂದು ಮಹಿಳೆಯರ ದಿನ. ಮಹಿಳೆಯರಿಗಾಗಿ ಒಂದು ದಿನ ಎಂಬ ವಾಕ್ಯವನ್ನು ನೋಡುತ್ತಿದ್ದಂತೆ ಹಾಗೆ ಮುಖದಲ್ಲಿ ಒಂದು ನಗು ಮೂಡಿತು ಮನಸ್ಸು ಅದಾಗಲೇ ಯೋಚನೆಯಲ್ಲಿ ಮುಳುಗಿತು.
ದೂರದ ದೇಶದಲ್ಲಿ ಕೈ ತುಂಬಾ ಸಂಬಳದ ಜೊತೆ, ಬಿಡುವಿಲ್ಲದ ಕೆಲಸ. ನಡುವೆ ಬಿಟ್ಟು ಬಿಡದಂತೆ ಕಾಡುವ ಊರಿನ ನೆನಪು. ಅಮ್ಮನೊಡನೆ ಮಾತನಾಡಿದಾಗೆಲ್ಲಾ ಊರಿಗೆ ಯಾವಾಗ ಬರುತ್ತಿ ಎಂಬ ಪ್ರಶ್ನೆಯಲ್ಲಡಗಿರುತ್ತಿದ್ದ ಅವರ ಒಂಟಿತನದ ನೋವು. ವೃದಾಪ್ಯದ ಅಂಚಿನಲ್ಲಿ ಆಗಾಗ ಕೈಗೊಡುವ ಆರೋಗ್ಯದ ನಡುವೆ ಕುಟುಂಬದ ಜೊತೆ ಸಮಯ ಕಳೆಯ ಬೇಕೆಂಬ ಅಮ್ಮನ ನಿರೀಕ್ಷೆ ಅರ್ಥವಾಗಲು ಮಗಳಾಗಿ ನನಗೆ ಕಷ್ಟವೆನಿಸಲಿಲ್ಲ. ಅನಿವಾರ್ಯಕ್ಕೊ, ಅಗತ್ಯಕ್ಕೊ ಅಥವಾ ಮತ್ಯಾವುದಕ್ಕೊ ದುಡಿಮೆ ಎನ್ನುವ ಚಕ್ರವ್ಯೂಹದಲ್ಲಿ ಸಿಲುಕಿದ ಮೇಲೆ ಅದರಿಂದ ಹೊರಗೆ ಬರುವುದು ಸುಲಭದ ಮಾತಲ್ಲ.‌ ಆದರೆ ಗಂಡ, ಮಗು ಸಂಸಾರವೆಂಬ ನನ್ನ ಸ್ವಾರ್ಥಕ್ಕಿಂತ ಅಮ್ಮನ ಅಸಹಾಯಕತೆ ದೊಡ್ಡದಾಗಿ ಕಂಡಿತು. ಹೆತ್ತವರ ನೋಡಿಕೊಳ್ಳುವುದು ಗಂಡುಮಕ್ಕಳ ಕರ್ತವ್ಯ ಎನ್ನುವುದಾದರೆ, ಮಗಳಾಗಿ ನನಗೂ ಕರ್ತವ್ಯ ವಿಲ್ಲವೇ ಎಂದು ಸಾಲು ಸಾಲು ಪ್ರಶ್ನೆಗಳು ಮನದೊಳಗೆ ಸಮುದ್ರದ ಅಲೆಗಳಂತೆ ಅಪ್ಪಳಿಸಿದಾಗ ಹೆಚ್ಚು ತಡಮಾಡದೆ ಕೆಲಸಕ್ಕೆ ರಾಜಿನಾಮೆಯನ್ನಿತ್ತು ಅಮ್ಮನ ಮಡಿಲು ಸೇರಿಕೊಂಡೆ.
ಆಧುನಿಕ ಯುಗವೆಂದು ಕರೆಯಿಸಿಕೊಳ್ಳುತ್ತಿರುವ ಈ ಕಾಲದಲ್ಲಿ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಗಂಡಿಗಿಂತ ಮುಂದಿದ್ದರೂ, ಬದಲಾದ ಹೊಸ ಹೊಸ ಸಮಸ್ಯೆಗಳ ನಡುವೆ ತನ್ನ ಆಸ್ತಿತ್ವಕ್ಕಾಗಿ ಹೆಣ್ಣು ಹೋರಾಟ ಮಾಡಬೇಕಾಗಿದೆ. ಕಾಲದ ಜೊತೆ ಓಡಬೇಕಾಗಿದೆ.
ಆಧುನಿಕ ಮಹಿಳೆಯ ಜೀವನವನ್ನು ಒಮ್ಮೆ ನಿಮ್ಮಷ್ಟಕ್ಕೆ ಊಹಿಸಿಕೊಳ್ಳಿ, ಕುಟುಂಬ, ಮಕ್ಕಳ ಲಾಲನೆ ಪಾಲನೆ, ಮನೆಯ ಒಳಗೂ ಹೊರಗೂ ದುಡಿಯುವಿಕೆ.
ಬೆಳಗಿನ ಜಾವದ ಸವಿ ನಿದ್ದೆ ಇನ್ನೂ ಬಾಕಿ ಇರುವಾಗಲೇ ಅರಚಿಕೊಳ್ಳುವ ಅಲಾರಂ, ಏಳದಿದ್ದರೆ‌ ಅಂದಿನ ಕೆಲಸ ಪೂರೈಸುವುದಿಲ್ಲ ಎಂಬ ಅನಿವಾರ್ಯತೆ. ನಿದ್ರೆಯಲ್ಲಿರುವ ಕಣ್ಣನ್ನು ಉಜ್ಜುತ್ತಾ ಅಡುಗೆ ಮನೆ ಹೊಕ್ಕಿದರೆ, ಅಲ್ಲಿ ‌ಬಿಡುವಿಲ್ಲದ ಕೆಲಸ. ಮಲಗಿರುವ ಗಂಡ ಮಕ್ಕಳನ್ನು ಎಬ್ಬಿಸಿ ಬೆಳಗಿನ ಉಪಹಾರ ಮುಗಿಸಿ, ಡಬ್ಬ ತುಂಬಿಸಿ, ತಾನು ಕೆಲಸಕ್ಕೆ ಹೊರಡಬೇಕು. ಗಬಗಬನೇ ತಿಂದು, ಬ್ಯಾಗನ್ನು ಹೆಗಲಿಗೆ ಏರಿಸಿ ಮುಖದಲ್ಲೊಂದು ಕೃತಕ ಮಂದಹಾಸ ಬೀರುತ್ತಾ ತರಾತುರಿಯಲ್ಲಿ ಕೆಲಸಕ್ಕೆ ಹೊರಟರೆ, ಸಂಜೆಯವರೆಗಿನ ನಿರಂತರ ದುಡಿಮೆ. ನಂತರ ಸಂಜೆ ಮನೆಗೆ ಬಂದರೆ, ಮತ್ತದೇ ಗಂಡ, ಮನೆ, ಮಕ್ಕಳು ಎಂದು ಸಂಸಾರದ ಚಿಂತೆ.
ಎಂತಹ ನೋವಾದರೂ ಅದನ್ನು ತನ್ನ ಮನದಲ್ಲೇ ಬಚ್ಚಿಟ್ಟು, ಜೀವನದ ಎಲ್ಲಾ ಘಟ್ಟದಲ್ಲೂ ಸಫಲತೆಯನ್ನು ಕಂಡುಕೊಳ್ಳಬಲ್ಲ ಹೆಣ್ಣು ಎಂತಹ ಕಷ್ಟದ ಸನ್ನಿವೇಶವನ್ನು ಎದುರಿಸಬಲ್ಲಳು ನಿಜ, ಆದರೆ ಆಧುನಿಕ ಸಮಾಜ ಆಕೆಯನ್ನು ಇನ್ನೂ ಕೀಳಾಗಿ ಕಾಣುವ, ತನ್ನ ಎಲ್ಲಾ ದೌರ್ಬಲ್ಯಗಳಿಗೆ ಆಕೆಯಲ್ಲೇ ತಪ್ಪನ್ನು ‌ಹುಡುಕುವ ಮನೋಭಾವ ಇನ್ನೂ ಬದಲಾಗಿಲ್ಲ.
ಹೆಣ್ಣು ಮಗುವೆಂದು ತಾಯ ಭ್ರೂಣದಲ್ಲೇ ಹತ್ಯೆ ಮಾಡುವವರ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಹೆಣ್ಣು ಗಂಡಿನ ಸಂಖ್ಯೆಯ ಅನುಪಾತದಲ್ಲಿ ಹೆಣ್ಣಿನ ಸಂಖ್ಯೆ ಗಣನೀಯವಾಗಿ ಕುಸಿದಿದೆ. ವರದಕ್ಷಿಣೆ, ಅತ್ಯಾಚಾರ, ದೌರ್ಜನ್ಯದಂತಹ ಪಿಡುಗುಗಳು ಅವಳನ್ನು ಹಿಂದಿಗಿಂತಲೂ ಹೆಚ್ಚು ಪೀಡಿಸಿದೆ. ಸ್ವಲ್ಪ ಹೆಚ್ಚಾಗಿ ನಡೆದರೆ ಬಜಾರಿ, ಅಂಜಿ ನಡೆದರೆ ಅಳುಮುಂಜಿ ಎನ್ನುವ ಸಮಾಜ, ಹೆಣ್ಣಿನ ಮೇಲೆ ನಡೆವ ಅತ್ಯಾಚಾರಕ್ಕೆ ಆಕೆ ಹಾಕಿರುವ ಬಟ್ಟೆ ಕಾರಣ, ರಾತ್ರಿ ಒಬ್ಬಂಟಿಯಾಗಿ ತಿರುಗುವ ಅಗತ್ಯವೇನಿತ್ತು ಎಂದು ಪ್ರಶ್ನಿಸುತ್ತಾ ತನ್ನ ದೌರ್ಬಲ್ಯಗಳಿಗೆ ಪರದೆಯನ್ನು ಇಳಿಬಿಡುತ್ತದೆ.
ಹೆಣ್ಣಿಗೂ ಒಂದು ವ್ಯಕ್ತಿತ್ವವಿದೆ.‌ಅವಳಿಗೂ ಭಾವನೆಗಳಿವೆ ಎಂಬುದನ್ನು ಮರೆತ ನಮಗೆ ಪುರಾಣ ಕಾಲದಿಂದಲೂ ಸ್ತ್ರೀ ಯನ್ನು ವ್ಯಕ್ತಿಯಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ಗಂಡಿನ ದೃಷ್ಟಿಕೋನದಲ್ಲಿ ರಚಿಸಲ್ಪಟ್ಟ ಕಾವ್ಯಗಳು ಅವಳನ್ನು ಭೋಗದ ವಸ್ತುವಂತೆ ಕಾಣಿಸಿದರೆ, ಜಾಹಿರಾತುಗಳು ಅವಳನ್ನು ಮಾರುಕಟ್ಟೆ ಸರಕಾಗಿಸಿದೆ. ಧಾರವಾಹಿಗಳು ಅವಳಿರುವುದು ಕೊಡಪಾನಗಟ್ಟಲೇ ಕಣ್ಣೀರು ಸುರಿಸಲು ಎಂಬಂತೆ ಬಿಂಬಿಸಿದರೆ, ಸಿನಿಮಾಗಳು ಆಕೆಯನ್ನು ಲೈಂಗಿಕ ದೃಷ್ಟಿಯಿಂದ ಚಿತ್ರಿಸುತ್ತಿವೆ.
ಪ್ರತಿ ಗಂಡಿನ ಬಾಳಿನ ಸಾರಥಿಯಾಗಿ‌ ಬದುಕಿನ ಪಾಠವನ್ನು ಕಲಿಸಿಕೊಡುವ, ತನ್ನನ್ನು ನಂಬಿದ ಜೀವಗಳಿಗೆ ಪ್ರೀತಿಯನ್ನು ತುಂಬಿ, ಕಷ್ಟದ ಕತ್ತಲಿಗೆ ನಂಬಿಕೆಯ ದೀಪವನ್ನು ಬೆಳಗಿಸುವ ಹೆಣ್ಣನ್ನು ಆಕೆಯ ಶಕ್ತಿ ಸಾಮರ್ಥ್ಯಗಳಿಂದ ಗುರುತಿಸಿ ಗೌರವಿಸಬೇಕಾಗಿದೆ. ಪುರುಷ ಸಮಾಜವು ಮಹಿಳೆಯಿಲ್ಲದೆ ತನ್ನ ಜೀವನ ಅಪೂರ್ಣ ಎಂಬ ಸತ್ಯವನ್ನು ಅರಿತುಕೊಳ್ಳಬೇಕಾಗಿದೆ. ತಾಯಿಯಾಗಿ, ಸಹೋದರಿಯಾಗಿ, ಸಂಗಾತಿಯಾಗಿ, ಪತ್ನಿಯಾಗಿ, ಮಗಳಾಗಿ ಬೆನ್ನ ಹಿಂದೆ ನಿಂತು ಬಾಳನ್ನು ಬೆಳಗುವ ಹೆಣ್ಣನ್ನು ಕಾಮದ ದೃಷ್ಟಿಯಿಂದ ನೋಡುತ್ತಾ, ಅತ್ಯಾಚಾರ, ಭ್ರೂಣ ಹತ್ಯೆ, ದೌರ್ಜನ್ಯವೆಸಗುವುದು ಪುರುಷಾರ್ಥವೇ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ಹೆಣ್ಣು ಪ್ರೀತಿ, ಸ್ನೇಹ, ಆತ್ಮವಿಶ್ವಾಸದ ಬದುಕು ಸಾಗಿಸುವ ವಾತಾವರಣ ಉಂಟಾಗಬೇಕಿದೆ. ಆಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ ಬರಲು ಸಾಧ್ಯ.

ಹೆಣ್ಣಿಂದಲೇ ಇಹವು ಹೆಣ್ಣಿಂದಲೇ ಪರವು
ಹೆಣ್ಣಿಂದಲೇ ಸಕಲ ಸಂಪದವು ಹೆಣ್ಣೊಲ್ಲ
ದಣ್ಣಗಳು ಯಾರು?
ಸಾಕ್ಷಟಿವಿ ಬಳಗದಿಂದ ಸಮಸ್ತ ಮಹಿಳಾ ಕುಲಕ್ಕೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

Related posts

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿದ ರಾಜ್ಯ ಸರ್ಕಾರ: ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ! ಯಾವ ಸಮುದಾಯಕ್ಕೆ ಎಷ್ಟು ಸಿಗಲಿದೆ ಪಾಲು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿದ ರಾಜ್ಯ ಸರ್ಕಾರ: ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ! ಯಾವ ಸಮುದಾಯಕ್ಕೆ ಎಷ್ಟು ಸಿಗಲಿದೆ ಪಾಲು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

April 25, 2026
ದೆಹಲಿಯಲ್ಲಿ ರಾಜಕೀಯ ಸಂಚಲನ: ಆಪ್‌ಗೆ ಭಾರೀ ಶಾಕ್!

ದೆಹಲಿಯಲ್ಲಿ ರಾಜಕೀಯ ಸಂಚಲನ: ಆಪ್‌ಗೆ ಭಾರೀ ಶಾಕ್!

April 25, 2026
Tags: WomenWomen's Day
ShareTweetSendShare
Join us on:

Related Posts

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿದ ರಾಜ್ಯ ಸರ್ಕಾರ: ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ! ಯಾವ ಸಮುದಾಯಕ್ಕೆ ಎಷ್ಟು ಸಿಗಲಿದೆ ಪಾಲು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿದ ರಾಜ್ಯ ಸರ್ಕಾರ: ದಶಕಗಳ ಹೋರಾಟಕ್ಕೆ ಕೊನೆಗೂ ಸಿಕ್ಕಿತು ಜಯ! ಯಾವ ಸಮುದಾಯಕ್ಕೆ ಎಷ್ಟು ಸಿಗಲಿದೆ ಪಾಲು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!

by Shwetha
April 25, 2026
0

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ದಶಕಗಳಿಂದಲೂ ಚರ್ಚೆಯಲ್ಲಿದ್ದ ಹಾಗೂ ತೀವ್ರ ಕುತೂಹಲ ಮೂಡಿಸಿದ್ದ ಒಳ ಮೀಸಲಾತಿ ಕಗ್ಗಂಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊನೆಗೂ ಪರಿಹಾರ ಕಂಡುಹಿಡಿದಿದೆ....

ದೆಹಲಿಯಲ್ಲಿ ರಾಜಕೀಯ ಸಂಚಲನ: ಆಪ್‌ಗೆ ಭಾರೀ ಶಾಕ್!

ದೆಹಲಿಯಲ್ಲಿ ರಾಜಕೀಯ ಸಂಚಲನ: ಆಪ್‌ಗೆ ಭಾರೀ ಶಾಕ್!

by Shwetha
April 25, 2026
0

ದೆಹಲಿಯ ರಾಜಕೀಯ ಅಂಗಳದಲ್ಲಿ ಅಚ್ಚರಿ ಮೂಡಿಸುವ ಬೆಳವಣಿಗೆ ನಡೆದಿದೆ. ಯುವ ಸಂಸದ ರಾಘವ್ ಚಡ್ಡಾ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಸಭೆಯಲ್ಲಿ ಇರುವ ಆಮ್ ಆದ್ಮಿ ಪಕ್ಷದ (AAP)...

ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ಸಂಪುಟ IN & OUT

ಸಚಿವ ಸಂಪುಟ ವಿಸ್ತರಣೆ ಸುಳಿವು: ಮೇ 20ರೊಳಗೆ ಸಾಧ್ಯತೆ!

by Shwetha
April 25, 2026
0

ರಾಜ್ಯದ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆಗಳು ಮತ್ತೆ ಜೋರಾಗಿದೆ. ಇತ್ತೀಚೆಗೆ ಹಿರಿಯ ಕಾಂಗ್ರೆಸ್ ಶಾಸಕರು ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್‌ಗೆ ಸಂಪುಟ ವಿಸ್ತರಣೆ ಮಾಡುವಂತೆ ಮನವಿ...

ದೆಹಲಿ ರಾಜಕೀಯದಲ್ಲಿ ಗರಿಗೆದರಿದ ಡಿಕೆ ಶಿವಕುಮಾರ್ ಚಟುವಟಿಕೆ

ದೆಹಲಿ ರಾಜಕೀಯದಲ್ಲಿ ಗರಿಗೆದರಿದ ಡಿಕೆ ಶಿವಕುಮಾರ್ ಚಟುವಟಿಕೆ

by Shwetha
April 25, 2026
0

ದಾವಣಗೆರೆ ಉಪಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಹಲವು ರಾಜಕೀಯ ಚಟುವಟಿಕೆಗಳು ವೇಗ ಪಡೆದಿವೆ. ಈ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಆಪ್ತ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ....

ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಕನ್ನಡಿ ಹಿಡಿದ ದೂದ್ ಪೇಡ ದಿಗಂತ್: ಈಗ ಬರುವ ಬಾಡಿಗೆ ಹಣವೇ ನನಗೆ ಆಧಾರ!

ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಕನ್ನಡಿ ಹಿಡಿದ ದೂದ್ ಪೇಡ ದಿಗಂತ್: ಈಗ ಬರುವ ಬಾಡಿಗೆ ಹಣವೇ ನನಗೆ ಆಧಾರ!

by Shwetha
April 25, 2026
0

ಕನ್ನಡ ಚಿತ್ರರಂಗದ ಚಾಕೊಲೇಟ್ ಹೀರೊ ಎಂದೇ ಖ್ಯಾತರಾಗಿರುವ ದಿಗಂತ್ ಮಂಚಾಲೆ ಸ್ಯಾಂಡಲ್‌ವುಡ್‌ನಲ್ಲಿ ಎರಡು ದಶಕಗಳನ್ನು ಪೂರೈಸಿದ್ದಾರೆ. ಸತತ 20 ವರ್ಷಗಳ ಕಾಲ ತೆರೆಯ ಮೇಲೆ ಸಕ್ರಿಯರಾಗಿದ್ದ ದಿಗಂತ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram