Womens World Championship
ಪ್ರೀ ಕ್ವಾರ್ಟರ್ಗೆ ನಿಖಾತ್ ಜರೀನ್, ಮನೀಶಾ
ಭಾರತದ ತಾರಾ ಬಾಕ್ಸರ್ ನಿಖಾತ್ ಜರೀನ್ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಪ್ರೀಕ್ವಾರ್ಟರ್ ತಲುಪಿದ್ದಾರೆ.
50 ಕೆ.ಜಿ. ವಿಭಾಗದಲ್ಲಿ ನಿಖಾತ್ ಆಫ್ರಿಕಾ ಚಾಂಪಿಯನ್ ಬೌಲಾಮ್ ರೌಮೈಸಾ ವಿರುದ್ಧ 5-0 ಸರ್ವಾನುಮತದಿಂದ ಗೆದ್ದರು.
ಆರಂಭಿಕ ಸುತ್ತುಗಳಲ್ಲಿ ಇಬ್ಬರು ಬಾಕ್ಸರ್ಗಳು ರಕ್ಷಣಾತ್ಮಕ ಆಟವಾಡಿದರು. ನಿಖಾತ್ ವಿಭಿನ್ನ ಪಂಚ್ಗಳನ್ನು ನೀಡಿದರೆ ಬೌಲಾಮ್ ರೌಮೈಸಾ ಕೂಡ ಪಂಚ್ಗಳನ್ನು ನೀಡಿ ಪ್ರಾಬಲ್ಯ ಮೆರೆದರು. ಮೊದಲ ಸುತ್ತಿನಲ್ಲಿ ನಿಖಾತ್ ಮೇಲುಗೈ ಸಾಧಿಸಿದರು.
ಕೊನೆಯಲ್ಲಿ ಇಬ್ಬರು ಬಾಕ್ಸರ್ಗಳು ಆಕ್ರಮಣಕಾರಿಯಾಗಿ ಆಡಿ ಪಂಚ್ಗಳನ್ನು ನೀಡಿದರು. ನಿಖಾತ್ ಗೆಲುವು ದಾಖಲಿಸಿದರು.
ಎಲ್ಲಾ ಸುತ್ತುಗಳಲ್ಲಿ ಪ್ರಾಬಲ್ಯ ಮೆರೆಯುವುದು ನನ್ನ ಉದ್ದೇಶವಾಗಿತ್ತು. ರೌಮೈಸಾ ಚಾಂಪಿಯನ್ಶಿಪ್ನಲ್ಲಿ ಅಗ್ರ ಶ್ರೇಯಾಂಕಿತರಾಗಿದ್ದಾರೆ. ಅಗ್ರ ಶ್ರೇಯಾಂಕಿತರನ್ನು ಮಣಿಸಿದರೆ ತೀರ್ಪುಗಾರರಿಂದ ಪ್ರಭಾವ ಬೀರಬಹುದೆಂದು ಗೊತ್ತಿತ್ತು ಎಂದು ನೀಆಕತ್ ಜರೀನ್ ತಿಳಿಸಿದ್ದಾರೆ.
ಭಾರತದ ಮತ್ತೋರ್ವ ಮಹಿಳಾ ಬಾಕ್ಸರ್ ಕಳೆದ ಬಾರಿಯ ಕಂಚಿನ ಪದಕ ವಿಜೇತೆ ಮನಿಶಾ ಮೌನ್ 57 ಕೆಜಿ ವಿಭಾಗದಲ್ಲಿ ರಹೀಮಾ ಟೀನಾ ವಿರುದ್ಧ 5-0 ಅಂತರದಿಂದ ಗೆದ್ದು 16ರ ಸುತ್ತು ಪ್ರವೇಶಿಸಿದ್ದಾರೆ.
Women’s World Championship : Pre quarter Nikhat Zareen, Manisha