2011–2019 ರ ಅವಧಿಯಲ್ಲಿ ಭಾರತದ ಬಡತನ 12.3% ಕಡಿಮೆಯಾಗಿದೆ – ವಿಶ್ವ ಬ್ಯಾಂಕ್  

1 min read

World Bank on glass building. Mirrored sky and city modern facade. Global capital, business, finance, economy, banking and money concept 3D rendering illustration.

2011–2019 ರ ಅವಧಿಯಲ್ಲಿ ಭಾರತದ ಬಡತನ 12.3% ಕಡಿಮೆಯಾಗಿದೆ – ವಿಶ್ವ ಬ್ಯಾಂಕ್

ಭಾರತದಲ್ಲಿ ಬಡತನವು 2011 ಕ್ಕೆ ಹೋಲಿಸಿದರೆ 2019 ರಲ್ಲಿ ಶೇಕಡಾ 12.3 ರಷ್ಟು ಕಡಿಮೆಯಾಗಿದೆ. 2011 ರಲ್ಲಿ 22.5 ಶೇಕಡಾದಿಂದ 2019 ರಲ್ಲಿ ಶೇಕಡಾ 10.2 ಕ್ಕೆ ಬಡತನದ ಜನರ ಸಂಖ್ಯೆ ಕಡಿಮೆಯಾಗಿದೆ ಎಂದು ವಿಶ್ವ ಬ್ಯಾಂಕ್ ವರದಿಮಾಡಿದೆ…

ವಿಶ್ವ ಬ್ಯಾಂಕ್‌ನ ನೀತಿ ಸಂಶೋಧನಾ ಕಾರ್ಯಾಗಾರದ ಪ್ರಕಾರ, ನಗರಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಕಡು ಬಡತನ ಕಡಿಮೆಯಾಗಿದೆ.  2011 ರಿಂದ 2019 ರ ಅವಧಿಯಲ್ಲಿ ಗ್ರಾಮೀಣ ಬಡತನ ಶೇಕಡಾ 14.7 ರಷ್ಟು ಕಡಿಮೆಯಾಗಿದೆ ಮತ್ತು ನಗರಗಳಲ್ಲಿ  ಶೇಕಡಾ 7.9 ರಷ್ಟು ಕಡಿಮೆಯಾಗಿದೆ.

ಅಧ್ಯಯನದ ಪ್ರಕಾರ, ಸಣ್ಣ ಜಮೀನು ಹೊಂದಿರುವ ರೈತರು ಹೆಚ್ಚಿನ ಆದಾಯದ ಬೆಳವಣಿಗೆಯನ್ನು ಅನುಭವಿಸಿದ್ದಾರೆ. 2013 ಮತ್ತು 2019 ರ ಎರಡು ಸಮೀಕ್ಷೆಗಳ ಪ್ರಕಾರ  ಅತಿ ಚಿಕ್ಕ ಭೂಹಿಡುವಳಿ ಹೊಂದಿರುವ ರೈತರ ನೈಜ ಆದಾಯವು 10 % ಏರಿಕೆಯಾಗಿದೆ.  ಇದು ಅತಿದೊಡ್ಡ ಭೂ ಹಿಡುವಳಿ ಹೊಂದಿರುವ ರೈತರಿಗೆ ಹೋಲಿಸಿದರೆ 2 % ನಷ್ಟು ಬೆಳವಣಿಗೆಯಾಗಿದೆ.

World Bank report says extreme poverty in India declines by 12.3 percentage points during 2011-2019

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd