World Cup 2022 : ಮೈದಾನದಲ್ಲಿಯೇ ಕಣ್ಣೀರು ಹಾಕಿದ ಹರ್ಮನ್..!!

1 min read
world-cup-2022-harmanpreet-kaur-crying saaksha tv

World Cup 2022 : ಮೈದಾನದಲ್ಲಿಯೇ ಕಣ್ಣೀರು ಹಾಕಿದ ಹರ್ಮನ್..!!

ಐಸಿಸಿ ಮಹಿಳಾ ವಿಶ್ವಕಪ್ 2022 ರ ಅಂಗವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಉಪನಾಯಕಿ ಹರ್ಮನ್‌ಪ್ರೀತ್ ಕೌರ್  ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು.

ಬ್ಯಾಟಿಂಗ್ ನಲ್ಲಿ 48 ರನ್ ಗಳಿಸಿದ ಹರ್ಮನ್ ಪ್ರಿತ್ ಕೌತ್, ಭಾರತ ತಂಡ ಬೃಹತ್ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

 ಈ ಮೆಗಾ ಇವೆಂಟ್‌ನಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡಿದ ಹರ್ಮನ್ ಎರಡು ವಿಕೆಟ್ ಪಡೆದರು.

ಅಷ್ಟೇ ಅಲ್ಲ.. ಆಕ್ರಮಣಕಾರಿ ಆಟವಾಡುತ್ತಿದ್ದ  ದಕ್ಷಿಣ ಆಫ್ರಿಕಾ ಆರಂಭಿಕ ಆಟಗಾರ್ತಿ ಲಿಜಿ ಲೀ ಅವರನ್ನು ರನೌಟ್ ರೂಪದಲ್ಲಿ ವಾಪಸ್ ಕಳುಹಿಸುಹಿಸಿದರು.

world-cup-2022-harmanpreet-kaur-crying saaksha tv

ಅದೇ ರೀತಿಯಲ್ಲಿ ಇತರ ಎರಡು ರನೌಟ್‌ ಗಳನ್ನು ಮಾಡಿ ತಂಡಕ್ಕೆ ಮೇಲುಗೈ ತಂದುಕೊಟ್ಟರು. ಸೆಮಿಸ್‌ ಪ್ರವೇಶಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಹರ್ಮಲ್ ಶತಾಯಗತಾಯ ಹೋರಾಟ ಮಾಡಿದರು. ಆದ್ರೆ ನಿರೀಕ್ಷಿತ ಫಲಿತಾಂಶ ಬರಲಿಲ್ಲ.

ಪಂದ್ಯದ ಕೊನೆಯ ಓವರ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಹರ್ಮನ್ ಪ್ರಿತ್ ಕೌರ್ ಹೋರಾಟವನ್ನು ವ್ಯರ್ಥ ಮಾಡುತ್ತಾ ಗೆಲುವಿನ ಕೇಕೆ ಹಾಕಿತು.

ಇದರೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಿಂದ ಹೊರ ನಡೆಯಿತು. ಹೀಗಾಗಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ  ಹರ್ಮನ್ ಪ್ರಿತ್ ರ ವಿಡಿಯೋಗಳನ್ನು ಶೇರ್ ಮಾಡುತ್ತಾ ಬೆಂಬಲ ನೀಡುತ್ತಿದ್ದಾರೆ.

ಅಭಿಮಾನಿಗಳು ಶೇರ್ ವಿಡಿಯೋದಲ್ಲಿ “ ಹರ್ಮನ್ ಪ್ರಿತ್ ಕೌರ್ ಕಣ್ಣೀರು ಹಾಕಿದ್ದಾರೆ. ಭಾರತ ಸಂಕಷ್ಟದಲ್ಲಿದ್ದಾಗ ವಿಕೆಟ್ ಉರುಳಿಸಿ ಸ್ಮೃತಿ ಮಂದಾನ ಅವರನ್ನ ಅಪ್ಪಿಕೊಂಡು ಭಾವುಕರಾಗಿದ್ದಾರೆ.

ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd