ಬಾಹ್ಯಾಕಾಶದಲ್ಲಿ ನಿರ್ಮಾಣವಾಗಲಿದೆ ಸ್ಟಾರ್ ಹೋಟೆಲ್.. ವಿಶೇಷತೆ ಏನು ಗೊತ್ತಾ..?

1 min read
space-hotel

ಬಾಹ್ಯಾಕಾಶದಲ್ಲಿ ಸ್ಟಾರ್ ಹೋಟೆಲ್.. ವಿಶೇಷತೆ ಏನು ಗೊತ್ತಾ..?

ನಾವು ಭೂಮಿ ಮೇಲೆ ವಿಭಿನ್ನವಾದ ಹೋಟೆಲ್ ಗಳನ್ನ ನೋಡಿದ್ದೇವೆ. ಕೆಲ ಹೋಟೆಲ್ ಗಳ ಬಗ್ಗೆ ಕೇಳಿದ್ದೇವೆ. ಆಗಾದ್ರೆ ಬಾಹ್ಯಾಕಾಶದಲ್ಲಿ ಹೋಟೆಲ್ ಇದ್ದರೆ ಹೇಗಿರುತ್ತಿತ್ತು..? ಬಾಹ್ಯಾಕಾಶದಲ್ಲಿ ಹೋಟೆಲ್ ಇರೋಕೆ ಹೇಗೆ ಸಾಧ್ಯ..? ಒಂದು ವೇಳೆ ಅಂತರಿಕ್ಷದಲ್ಲಿ ಹೋಟೆಲ್ ಇದ್ದರೇ ಹೇಗಿರುತ್ತೆ…? ಅಂತಾ ಯೋಚನೆ ಮಾಡೋರು ಕೇವಲ ಆರು ವರ್ಷ ತಾಲ್ಮೆಯಿಂದ ಇದ್ದರೇ ಸಾಕು ಬಾಹ್ಯಾಕಾಶದ ಹೋಟೆಲ್ ನೋಡಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಆರ್ಬಿಟಲ್ ಅಸೆಂಬ್ಲಿ ಕಾಪೆರ್Çರೇಷನ್ (ಒಎಸಿ) ಎಂಬ ಕಂಪನಿ ಬಾಹ್ಯಕಾಶದಲ್ಲಿ ಒಂದು ಹೋಟೆಲ್ ನಿರ್ಮಿಸುತ್ತಿದೆ. ಭಾರಿ ಪ್ರತಿಷ್ಟಾತ್ಮಕವಾಗಿ ನಿರ್ಮಾಣವಾಗುತ್ತಿರುವ ಈ ಹೋಟೆಲ್ ಹೆಸರು, ವಾಯೇಜರ್ ಸ್ಪೇಸ್ ಸ್ಟೇಷನ್.

ಸುಮಾರು 400 ಮಂದಿಗೆ ಆತಿಥ್ಯ ಕೊಡುವ ಈ ಹೋಟೆಲ್ ನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇರುತ್ವೆ. ನಮ್ಮ ಭೂಮಿಯಲ್ಲಿರುವ ಹೋಟೆಲ್ ಕೊಠಡಿಗಳಿಗಿಂತ ಈ ಕೊಠಡಿಗಳು ಹೆಚ್ಚು ಸುಧಾರಿತವಾಗಿರುತ್ತವೆ. ವಾಯೇಜರ್ ಬಾರ್‍ಗಳು, ರೆಸ್ಟೋರೆಂಟ್‍ಗಳು, ಚಿತ್ರಮಂದಿರಗಳು, ಗ್ರಂಥಾಲಯಗಳು, ಸಂಗೀತ ಕಚೇರಿಗಳು, ಆರೋಗ್ಯ ಸ್ಪಾಗಳು, ಜಿಮ್‍ಗಳು, ವಿಶ್ರಾಂತಿ ಕೋಣೆಗಳು ಮತ್ತು ಬಾರ್‍ಗಳನ್ನು ಈ ಹೋಟೆಲ್ ಒಳಗೊಂಡಿರುತ್ತದೆ.

space-hotel

2025ಕ್ಕೆ ಹೋಟೆಲ್ ನಿರ್ಮಾಣ ಕಾರ್ಯ

ಹೌದು..! ಈ ಹೋಟೆಲ್ ನಿರ್ಮಾಣಕಾರ್ಯ 2025ಕ್ಕೆ ಆರಂಭವಾಗಿದ್ದು, 2027 ರ ವೇಳೆಗೆ ಪೂರ್ಣಗೊಳ್ಳಲಿದೆ. ನಂತರ ಪ್ರವಾಸಿಗರಿಗೆ ಹೋಟೆಲ್‍ನಲ್ಲಿ ಉಳಿಯಲು ಅವಕಾಶವಿದೆ. ಅಂದಹಾಗೆ ಸ್ಪೇಸ್ ಅಂದ್ರೆ ಅಲ್ಲಿ ಜನ ನಡೆಯೋಕೆ ಆಗಲ್ಲ. ಗಾಳಿಯಲ್ಲಿ ತೇಲುತ್ತಿರುತ್ತಾರೆ. ಇದನ್ನ ತಪ್ಪಿಸುವ ಉದ್ದೇಶದಿಂದ ಕೃತಕ ಗುರುತ್ವಾಕರ್ಷಣೆ ಶಕ್ತಿಯನ್ನ ಉತ್ಪಾದಿಸುವ ರೀತಿಯಲ್ಲಿ ಹೋಟೆಲ್ ನಿರ್ಮಾಣವಾಗಲಿದೆ.

ಹೋಟೆಲ್ನ ಕೃತಕ ಗುರುತ್ವವು ಚಂದ್ರನ ಮೇಲ್ಮೈಯಲ್ಲಿರುವ ಗುರುತ್ವಾಕರ್ಷಣೆಯ ಮಟ್ಟದಲ್ಲಿರುತ್ತದೆ. ಬಹುತೇಕ ಜಾಯಿಂಟ್ ವೀಲ್ ನಂತಿರುವ ಈ ಹೋಟೆಲ್ 90 ನಿಮಿಷಗಳಲ್ಲಿ ಭೂಮಿ ಸುತ್ತ ತಿರುಗಿಬರುತ್ತದೆ.

ಈ ಹೋಟೆಲ್ ನಿರ್ಮಾಣದಲ್ಲಿ ತುಂಬಾ ಅನುಭವಿರುವ ನಾಸಾ ವಿಜ್ಞಾನಿಗಳು, ಪೈಲಟ್‍ಗಳು, ಎಂಜಿನಿಯರ್‍ಗಳು ಮತ್ತು ವಾಸ್ತುಶಿಲ್ಪಿಗಳು ಕೆಲಸ ಮಾಡಲಿದ್ದಾರೆ.

ವಾಯೇಜರ್ ನಿಲ್ದಾಣದ ಕಲ್ಪನೆ 2012 ರಲ್ಲಿಯೇ ಬಂದಿದ್ದರೂ, ಅದನ್ನ ಕಾರ್ಯ ರೂಪಕ್ಕೆ ತರಲು 2018 ರಲ್ಲಿ ಒಎಸಿ ಸ್ಥಾಪಿಸಲಾಯಿತು. ಆದರೆ, ಒಎಸಿ ಹೋಟೆಲ್ ನಿರ್ಮಿಸುವ ವೆಚ್ಚ ಮತ್ತು ಹೋಟೆಲ್‍ನಲ್ಲಿ ಒಂದು ದಿನದ ವಾಸ್ತವ್ಯದ ಬಿಲ್ ಅನ್ನು ಇನ್ನೂ ಘೋಷಿಸಿಲ್ಲ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd