300 ಕೆ.ಜಿ.ತೂಕ.. 13 ಅಡಿ ಉದ್ದ.. ಪ್ರಪಂಚದ ಅತಿದೊಡ್ಡ ಮೀನು..

1 min read
world-largest-freshwater-fish saaksha tv

world-largest-freshwater-fish saaksha tv

300 ಕೆ.ಜಿ.ತೂಕ.. 13 ಅಡಿ ಉದ್ದ.. ಪ್ರಪಂಚದ ಅತಿದೊಡ್ಡ ಮೀನು..

ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನುಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.  

ಇದುವರೆಗೆ ಬೆಳಕಿಗೆ ಬಂದಿರುವ ದೊಡ್ಡ ಮೀನುಗಳಿಗೆ ಹೋಲಿಸಿದರೆ.. ಇದು ಅತಿದೊಡ್ಡ ಮೀನು ಎಂದು ದೃಢಪಟ್ಟಿದೆ.

ಇದು ಸುಮಾರು 13 ಅಡಿ ಉದ್ದ ಮತ್ತು ಸುಮಾರು 300 ಕೆಜಿ ತೂಕವಿದೆ.

ಬೃಹತ್ ಮೀನು ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಪತ್ತೆಯಾಗಿದೆ.

ಹತ್ತಾರು ಬಲೆಯಲ್ಲಿ ಇದನ್ನ ದಡಕ್ಕೆ ಎಳೆದು ತಂದಿದ್ದಾರೆ.

world-largest-freshwater-fish  saaksha tv
world-largest-freshwater-fish saaksha tv

ಖೆಮೆರ್ ಭಾಷೆಯಲ್ಲಿ ಈ ಮೀನನ್ನು ಕ್ರಿಸ್ಟನ್ಡ್ ಬೌರಾಮಿ  ( ಪೂರ್ಣ ಚಂದ್ರ) ಎಂದು ಕರೆಯಲಾಗುತ್ತದೆ.

ಅದರ ಆಕಾರದಿಂದಲೇ ಮೀನಿಗೆ ಈ ಹೆಸರು ಬಂದಿದೆ.

ನೀರಿನಲ್ಲಿ ಸಿಕ್ಕ ಈ ಮೀನನ್ನು ಪರಿಶೀಲಿಸಿದ ಸಂಶೋಧಕರು, ಮೀನುಗಾರರನ್ನು ಒಪ್ಪಿಸಿ ಎಲಕ್ಟ್ರಾನಿಕ್ ಟ್ಯಾಗ್ ಜೊತೆಗೆ ಮತ್ತೆ ನೀರಿಗೆ ಬಿಟ್ಟಿದ್ದಾರೆ.  

ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ನಲ್ಲಿಮಾನ್ಸ್ಟರ್ ಫಿಶ್ಕಾರ್ಯಕ್ರಮದ ನಿರೂಪಕ ಝೆಬ್ ಹೊಗನ್, ಇದನ್ನು ಅಧಿಕೃತವಾಗಿ ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು ಎಂದು ಹೆಸರಿಸಿದ್ದಾರೆ.

2005 ರಲ್ಲಿ, ಸಂಶೋಧಕರು ಥಾಯ್ಲೆಂಡ್ನಲ್ಲಿ 293 ಕೆಜಿ ತೂಕದ ಮೀನನ್ನು ಪತ್ತೆ ಮಾಡಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd