ಪ್ರಮುಖ ಅಂತರಾಷ್ಟ್ರೀಯ ಸುದ್ದಿಗಳು : LATEST UPDATES

1 min read

ಪೂರ್ಣ ಸುದ್ದಿಗಳನ್ನು ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ

ಪ್ರಮುಖ ಅಂತರಾಷ್ಟ್ರೀಯ ಸುದ್ದಿಗಳು : LATEST UPDATES

ನೈಜೀರಿಯಾದಲ್ಲಿ ವಸತಿಶಾಲೆಯಿಂದ 300ಕ್ಕೂ ಹೆಚ್ಚು ಬಾಲಕಿಯರ ಕಿಡ್ನಾಪ್ ..!

ನೈಜೀರಿಯಾದಲ್ಲಿ ವಸತಿಶಾಲೆಯಿಂದ 300ಕ್ಕೂ ಹೆಚ್ಚು ಬಾಲಕಿಯರ ಕಿಡ್ನಾಪ್ ..!

ನೈಜೀರಿಯಾ: ಪಶ್ಚಿಮ ಆಫ್ರಿಕಾದ ಉತ್ತರ ನೈಜೀರಿಯಾದಲ್ಲಿ ವಸತಿಶಾಲೆಗೆ ನುಗ್ಗಿದ್ದ ಬಂಧೂಕುಧಾರಿಗಳು 300ಕ್ಕೂ ಹೆಚ್ಚು ಬಾಲಕಿಯರನ್ನು ಅಪಹರಿಸಿದ್ದಾರೆ. ಸದ್ಯ ಪ್ರಕರಣ ಇಡೀ ದೇಶದ ಜನರನ್ನ ಬೆಚ್ಚಿ ಬೀಳಿಸಿದೆ. ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರ ಸಾಮೂಹಿಕ ಅಪಹರಣ ಮಾಡಲಾಗಿದ್ದು, ಪೊಲೀಸ್‌ ಮತ್ತು ಮಿಲಿಟರಿ ಪಡೆ ವಿದ್ಯಾರ್ಥಿನಿಯರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ನೈಜೀರಿಯಾದ ಝಾಂಫರಾ ರಾಜ್ಯದಲ್ಲಿ ಇಂತಹದೊಂದು ಘಟನೆ ನಡೆದಿದೆ. ಶಾಲೆಯ ಹಾಸ್ಟೆಲ್​ಗೆ ನುಗ್ಗಿದ ಶಸ್ತ್ರಸಜ್ಜಿತ ಕಿಡ್ನಾಪರ್​​ಗಳು ಸುಮಾರು 300ಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನ ಕಿಡ್ನಾಪ್ ಮಾಡಿದ್ದಾರೆ.

ಬಡತನದಿಂದ ಮುಕ್ತವಾಗಿದ್ಯಂತೆ ಚೀನಾ : ಕ್ಸಿ ಜಿನ್ಪಿಂಗ್ ಘೋಷಣೆ

ಬಡತನದಿಂದ ಮುಕ್ತವಾಗಿದ್ಯಂತೆ ಚೀನಾ : ಕ್ಸಿ ಜಿನ್ಪಿಂಗ್ ಘೋಷಣೆ

ಚೀನಾ : ಚೀನಾ ದೇಶ ಬಡತನದಿಂದ ಮುಖ್ಯವಾಗಿದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಧಿಕೃತವಾಗಿ ಘೋಷಿಸಿದ್ದಾರೆ. ಹೌದು.. ಚೀನಾದಲ್ಲಿ ತೀವ್ರ ಬಡತನದಲ್ಲಿ ಯಾರೂ ಸಹ ಇಲ್ಲ. ದೇಶದ ಸುಮಾರು 99 ಮಿಲಿಯನ್ ಜನರ ವಾರ್ಷಿಕ ಆದಾಯವು 2,300 ಯುವಾನ್ ಅಂದ್ರೆ ಸುಮಾರು 350 ಡಾಲರ್ ಗಿಂತಲೂ ಹೆಚ್ಚಿದೆ ಎಂದು ಚೀನಾದ ಸರ್ಕಾರಿ ಒಡೆತನದ ಪತ್ರಿಕೆಗಳ ಪ್ರಕಟಣೆಯಲ್ಲಿ ವರದಿ ಬಿತ್ತರವಾಗಿದೆ. ಕಳೆದ 8 ವರ್ಷಗಳಲ್ಲಿ ಬಡತನ ರೇಖೆಗಿಂತ ಕೆಳಗಿದ್ದ 9.89 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ ಎಂದು ಚೀನಾ ಸರ್ಕಾರವು ಘೋಷಿಸಿದೆ. ಅಲ್ಲದೇ ಸುಮಾರು 10 ಮಿಲಿಯನ್ ಜನರು ಹೊಸ ಮನೆಗಳಿಗೆ ತೆರಳಿದ್ದು, 27 ಮಿಲಿಯನ್ ಜನತೆಯ ಮನೆ ನವೀಕರಿಸಲಾಗಿದೆ. ಇದಕ್ಕಾಗಿ ಸರ್ಕಾರ ಒಟ್ಟು 1.6 ಟ್ರಿಲಿಯನ್ ಯುವಾನ್ ಅಂದ್ರೆ 250 ಬಿಲಿಯನ್ ಖರ್ಚು ಮಾಡಿದೆ ಎಂದೂ ಸಹ ಚೀನಾ ಸರ್ಕಾರವು ಹೇಳಿಕೊಂಡಿದೆ.

ಕದನ ವಿರಾಮ ನಿಯಮಗಳ ಪಾಲನೆಗೆ ಒಪ್ಪಂದದ ಬಳಿಕ ಕಾಶ್ಮೀರದ ಕುರಿತು ಟ್ವೀಟ್ ಮಾಡಿದ ಇಮ್ರಾನ್..!

ಕದನ ವಿರಾಮ ನಿಯಮಗಳ ಪಾಲನೆಗೆ ಒಪ್ಪಂದದ ಬಳಿಕ ಕಾಶ್ಮೀರದ ಕುರಿತಾಗಿ ಟ್ವೀಟ್ ಮಾಡಿದ ಇಮ್ರಾನ್..!

ಒಂದೆಡೆ ಗಡಿ ನಿಯಂತ್ರಣ ರೇಖೆಯಲ್ಲಿ  ಕದನ ವಿರಾಮ ನಿಯಮಗಳ ಒಪ್ಪಂದಗಳನ್ನು ಪಾಲಿಸಲು ಭಾರತ ಹಾಗೂ ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ. ಆದ್ರೆ ಇದರ ಬೆನ್ನಲ್ಲೇ ಪಾಕಿಸ್ತಾನವು ಮತ್ತೆ ಮತ್ತೆ ಕಾಶ್ಮೀರದ ವಿಚಾರವಾಗಿ ಭಾರತವನ್ನ ಕೆಣಕುವ ಕೆಲಸ ಮಾಡ್ತಿದೆ. ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ಕಾಶ್ಮೀರ ವಿವಾದದ ಕುರಿತು ಮಾತನಾಡಿ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಭಾರತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಅಮೆರಿಕಾ ವಿರುದ್ಧ ಬೇಹುಗಾರಿಕೆಯ ಅಪಪ್ರಚಾರ : ಚೀನಾಗೆ ತಕ್ಕ ಪಾಠ ಕಲಿಸಿದ ವಿಶ್ವದ ದೊಡ್ಡಣ್ಣ..!

ಅಮೆರಿಕಾ ವಿರುದ್ಧ ಬೇಹುಗಾರಿಕೆಯ ಅಪಪ್ರಚಾರ : ಚೀನಾಗೆ ತಕ್ಕ ಪಾಠ ಕಲಿಸಿದ ವಿಶ್ವದ ದೊಡ್ಡಣ್ಣ..!

ಅಮೆರಿಕಾ: ಅಮೆರಿಕಾ ತನ್ನ ಆರ್ಥಿಕ ಹಾಗೂ ಕೈಗಾರಿಕೆ ಕ್ಷೇತ್ರಗಳಿಗೆ ಸಂಬಂಧಿಸಿ ಬೇಹುಗಾರಿಕೆ ಮಾಡುತ್ತಿದೆ ಎಂದು ಚೀನಾ ಆರೋಪ ಮಾಡಿ ಅಪಪ್ರಚಾರ ಮಾಡ್ತಿದೆ. ಇದೀಗ ಚೀನಾ ಆರೋಪದ ವಿರುದ್ಧ ಸಿಡಿದೆದ್ದಿರುವ ವಿಶ್ವದ ದೊಡ್ಡಣ್ಣ ಚೀನಾಗೆ ದೊಡ್ಡ ಪೆಟ್ಟು ನೀಡಿದೆ. ಚೀನಾ ನಾಗರಿಕರಿಗೆ 10 ವರ್ಷಗಳ ಕಾಲ ಮಾನ್ಯತೆ ಹೊಂದಿರುವ ವೀಸಾ ನೀಡುವುದನ್ನು ನಿಷೇಧಿಸುವ ಮಸೂದೆ ಸೆನೆಟ್ ನಲ್ಲಿ ಮಂಡನೆಯಾಗಿದೆ. ಈ ಮೂಲಕ ಚೀನಾಗೆ ತಕ್ಕ ಉತ್ತರವನ್ನೇ ನೀಡಿದೆ ಅಮೆರಿಕಾ.

ಸಿರಿಯಾ ಮೇಲೆ ಅಮೆರಿಕಾ ವೈಮಾನಿಕ ದಾಳಿ : 22 ಮಂದಿ ಸಾವು..?

ಸಿರಿಯಾ ಮೇಲೆ ಅಮೆರಿಕಾ ವೈಮಾನಿಕ ದಾಳಿ : 22 ಮಂದಿ ಸಾವು..?

ಬಾಗ್ದಾದ್ : ಅಮೆರಿಕ ಮತ್ತೆ ಸಿರಿಯಾ ಮೇಲೆ ದಾಳಿ ನಡೆಸಿದೆ. ಯುನೈಟೆಡ್ ಸ್ಟೇಟ್ಸ್ ಗುರುವಾರ ರಾತ್ರಿ ಇರಾನ್ ಬೆಂಬಲಿತ ಇರಾಕ್ ಮಿಲಿಟೆಂಟ್ ಗ್ರೂಪ್ ಸ್ಥಾವರಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ.

ಈ ದಾಳಿಯಲ್ಲಿ ಇರಾಕಿ ಉಗ್ರಸಂಸ್ಥೆಗಳಿಗೆ ಸಂಬಂಧಿಸಿದ ಉಗ್ರಗಾಮಿ ನೆಲೆಗಳು ಧ್ವಂಸವಾಗಿವೆ. ಈ ದಾಳಿಯಲ್ಲಿ 22 ಜನರು ಸಾವನ್ನಪ್ಪಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ.

ಆದರೆ, ಒಬ್ಬ ವ್ಯಕ್ತಿ ಮಾತ್ರ ಸಾವನ್ನಪ್ಪಿದ್ದಾನೆ ಮತ್ತು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇರಾಕಿ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd