ಜಗತ್ತಿನ ಅತಿದೊಡ್ಡ ಮೃಗಾಲಯ ಗುಜರಾತ್‍ನ ಜಾಮ್ನಗರದಲ್ಲಿ ತಲೆಎತ್ತಲಿದೆ: ಅಂಬಾನಿಯ ಕನಸಿನ ಪ್ರಾಜೆಕ್ಟ್
ಗುಜರಾತ್: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದೀಗ ಮತ್ತೊಂದು ಅತಿ ದೊಡ್ಡ ಪ್ರಾಜೆಕ್ಟ್ ಗೆ ಮುಂದಾಗಿದೆ. ಮುಖೇಶ್ ಅಂಬಾನಿ ಪುತ್ರನ ಸಾರಥ್ಯದಲ್ಲಿ ಜಗತ್ತಿನ ಅತಿದೊಡ್ಡ ಮೃಗಾಲಯ ಇದೀಗ ಗುಜರಾತ್ ನ ಜಾಮ್ ನಗರದಲ್ಲಿ ತಲೆಎತ್ತಲಿದೆ. ಗುಜರಾತ್ ನ ಸಿಎಂ ಕಚೇರಿಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಂ.ಕೆ.ದಾಸ್ ಈ ವಿಚಾರವನ್ನು ಅಸೋಚಾಮ್ ಫೌಂಡೇಷನ್ ವೀಕ್ 2020 ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ : ಕಾರ್ ಬಾಂಬ್ ಸ್ಫೋಟ – 8 ಬಲಿ
ಹೆಮ್ಮೆಯ ವಿಚಾರ ಎಂದರೆ ಭಾರತದ ಗುಜರಾತ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಮೃಗಾಲಯವೂ ಈ ವಿಶ್ವದಲ್ಲೇ ಅತಿ ದೊಡ್ಡ ಮೃಗಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಒಂದೇ ಜಾಗದಲ್ಲಿ ಅತಿಹೆಚ್ಚು ಬಗೆಯ ಪ್ರಾಣಿ ಸಂಕುಲವಿರುವ ಮೃಗಾಲಯ ಇದಾಗಿರಲಿದೆ. ಬರೋಬ್ಬರಿ 250.1 ಎಕರೆ ಪ್ರದೇಶದಲ್ಲಿ ಈ ಮೃಗಾಲಯವನ್ನು ಅಭಿವೃದ್ಧಿಪಡಿಸಲಾಗುತ್ತದೆ. ರಿಲಯನ್ಸ್ ಇಂಡಸ್ಟ್ರಿಯ ಮೋಟಿ ಖಾವ್ಡಿ ರಿಫೈನರಿ ಪ್ರಾಜೆಕ್ಟ್ ಸಮೀಪದಲ್ಲೇ ಈ ಮೃಗಾಲಯ ಇರಲಿದೆ. ಮುಖೇಶ್ ಅಂಬಾನಿಯ ಕಿರಿಯ ಮಗ ಅನಂತ್ ಅಂಬಾನಿಯ ಸಾರಥ್ಯದಲ್ಲಿ ಪ್ರಾಜೆಕ್ಟ್ ಚಾಲ್ತಿಯಾಗಲಿದೆ. ಅಲ್ಲದೇ ಈ ಪ್ರಾಜೆಕ್ಟ್ ಗೆ ಈಗಾಗಲೇ ಸೆಂಟ್ರಲ್ ಝೂ ಅಥಾರಿಟಿ ಇಂದ ಅನುಮತಿ ಸಹ ಸಿಕ್ಕಿದೆ. ಈ ಮೃಗಾಲಯಕ್ಕೆ ಗ್ರೀನ್ಸ್ ಝೂವಾಲಾಜಿಕಲ್ ರೆಸ್ಕ್ಯೂ ಆಯಂಡ್ ರಿಹ್ಯಾಬಿಲಿಟೇಶನ್ ಕಿಂಗ್ಡಂ ಎಂಬ ಹೆಸರು ಇಡಾಗುತ್ತೆ ಎಂಬ ಮಾಹಿತಿಯೂ ಲಭ್ಯವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel