ಲಂಡನ್: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ದಾಖಲೆ ಬರೆದಿದ್ದ ಜಾನ್ ಟಿನ್ನಿಸ್‌ವುಡ್ (John Tinniswood) 112ನೇ ವಯಸ್ಸಿಗೆ ಸಾವನ್ನಪ್ಪಿದ್ದಾರೆ.
ಜಾನ್ ಟಿನ್ನಿಸ್‌ವುಡ್ ವಾಯುವ್ಯ ಇಂಗ್ಲೆಂಡ್‌ನ ಸೌತ್‌ಪೋರ್ಟ್‌ನಲ್ಲಿ ವಾಸಿಸುತ್ತಿದ್ದರು. ಅವರು ಕೇರ್ ಹೋಮ್‌ನಲ್ಲಿ ನಲ್ಲಿದ್ದರು. ಆದರೆ, ಸೋಮವಾರ ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ಹೇಳಿದ್ದಾರೆ. 1912ರಲ್ಲಿ ಟೈನಾನಿಕ್ ಹಡಗು ಮುಳುಗಿದ ಸಂದರ್ಭದಲ್ಲಿ ಇವರು ಜನಿಸಿದ್ದರು. ಕಳೆದ ವರ್ಷ ಏಪ್ರಿಲ್‌ನಲ್ಲಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯೆಂದು ಗುರುತಿಸಿಕೊಳ್ಳುವ ಮೂಲಕ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದ್ದರು. 114 ವರ್ಷದ ವೆನೆಜುವೆಲಾದ ಜುವಾನ್ ವಿಸೆಂಟೆ ಪೆರೆಜ್ ಅವರ ಮರಣದ ನಂತರ ಟಿನ್ನಿಸ್‌ವುಡ್ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.
ಟಿನ್ನಿಸ್‌ವುಡ್ ದಿನನಿತ್ಯ ವ್ಯಾಯಾಮ ಮಾಡುವುದರ ಜೊತೆಗೆ ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ತಿನ್ನುತ್ತಿದ್ದರು. ಕೊನೆಯ ದಿನಗಳಲ್ಲಿ ಅವರು ಹೆಚ್ಚಾಗಿ ಸಂಗೀತ ಆಲಿಸುತ್ತಿದ್ದರು ಎಲ್ಲರನ್ನು ತುಂಬಾ ಪ್ರೀತಿಯಿಂದ ನೋಡುತ್ತಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಟಿನ್ನಿಸ್‌ವುಡ್ ರಾಯಲ್ ಆರ್ಮಿ ಪೇ ಕಾರ್ಪ್ಸ್‌ನಲ್ಲಿ ಆಡಳಿತಾತ್ಮಕ ಪಾತ್ರವನ್ನು ನಿರ್ವಹಿಸಿದ್ದರು. ವಿಶ್ವದ ಅತ್ಯಂತ ಹಿರಿಯ ಮಹಿಳೆಯಾಗಿ 116 ವರ್ಷದ ಜಪಾನ್‌ನ ಟೊಮಿಕೊ ಇಟೂಕಾ ಗುರುತಿಸಿಕೊಂಡಿದ್ದಾರೆ.