WPL : ಡೆಲ್ಲಿ ಕ್ಯಾಪಿಟಲ್ಸ್ ನಾಯಕಿಯಾಗಿ ಮೆಗ್ ಲ್ಯಾನಿಂಗ್ ಆಯ್ಕೆ – ಜೆಮಿಮಾ ರಾಡ್ರಿಗಸ್ ಉಪನಾಯಕಿ…
ಭಾರತದ ಮೊದಲ WPL ( ಮಹಿಳಾ ಪ್ರೀಮಿಯರ್ ಲೀಗ್ ) ನಾಳೆ ಮಾರ್ಚ್ 4 ಆರಂಭವಾಗಲಿರುವ ಹಿನ್ನಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತಮ್ಮ ತಂಡದ ನಾಯಾಕಿ ಮತ್ತು ಉಪನಾಯಕಿಯನ್ನ ಆಯ್ಕೆ ಮಾಡಿದೆ. ಮೆಗ್ ಲ್ಯಾನಿಂಗ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ನಾಯಕಿಯಾಗಿ ಮತ್ತು ಜೆಮಿಮಾ ರಾಡ್ರಿಗಸ್ ಅವರನ್ನು ಉಪನಾಯಕಿಯಾಗಿ ಟೀಮ್ ಮ್ಯಾನೇಜ್ಮೆಂಟ್ ಆದೇಶ ಹೊರಡಿಸಿದೆ.
ಮೆಗ್ ಲ್ಯಾನಿಂಗ್ ಪ್ರಸ್ತುತಆಸ್ಟ್ರೇಲಿಯಾ ನಾಯಕಿಯಾಗಿದ್ದಾರೆ. ಆಸ್ಟ್ರೇಲಿಯಾ ತಂಡವಷ್ಟೇ ಅಲ್ಲ.. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಯಶಸ್ವಿ ಮಹಿಳಾ ನಾಯಕಿಯಾಗಿ ಮೆಗ್ ಹೆಸರು ಮಾಡಿದ್ದಾರೆ. ಕಳೆದ ಭಾನುವಾರ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿಯೂ ಇವರೆ. ನಾಯಕಿಯಾಗಿ ಮೆಗ್ ಅತಿ ಹೆಚ್ಚು ನಾಲ್ಕು ಟಿ20 ವಿಶ್ವಕಪ್ ಗೆದ್ದಿರುವುದು ಗಮನಾರ್ಹ. ಆಲ್ ರೌಂಡರ್ ಜೆಮಿಮಾ ರಾಡ್ರಿಗಸ್ ಭಾರತ ತಂಡದ ಆಟಗಾರ್ತಿ ಎಂಬುದು ಗೊತ್ತೇ ಇದೆ. WPL ನಲ್ಲಿ ಭಾಗವಹಿಸಲು ಮೆಗ್ ಈಗಾಗಲೇ ಮುಂಬೈ ತಲುಪಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭಾನುವಾರ ಆಡಲಿದೆ. ಮಾರ್ಚ್ 4ರ ಶನಿವಾರದಂದು ಡಬ್ಲ್ಯುಪಿಎಲ್ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ ನಡೆಯಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡಿದೆ. ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನನ್ ಲೈವ್ ಪರ್ಫಾರ್ಮೆನ್ಸ್ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮಹಿಳೆಯರಿಗೆ ಉಚಿತ ಪ್ರವೇಶ ನೀಡಲಾಗಿದೆ. ಈ ವರ್ಷದ ಡಬ್ಲ್ಯುಪಿಎಲ್‌ನ ಎಲ್ಲಾ ಪಂದ್ಯಗಳು ಮುಂಬೈನಲ್ಲಿ ನಡೆಯಲಿದೆ. ಜಿಯೋ ಸಿನಿಮಾದಲ್ಲಿ ನೀವು ಪಂದ್ಯಗಳನ್ನ ಉಚಿತವಾಗಿ ವೀಕ್ಷಿಸಬಹುದು.
WPL : Meg Lanning selected as Delhi Capitals captain – Jemima Rodrigues vice-captain…