WWE | ಡಬ್ಲ್ಯೂ ಡಬ್ಲ್ಯೂಈ ಸ್ಟಾರ್ ಸಾರಾ ಲೀ ನಿಧನ
ವರ್ಲ್ಡ್ ರೆಜ್ಲಿಂಗ್ ಎಂಟರ್ ಟೈನ್ಮೆಂಟ್ ಮಾಜಿ ರೆಜ್ಲರ್ ಸಾರಾ ಲಿ ವಿಧಿವಶರಾಗಿದ್ದಾರೆ.
ಈ ವಿಷಯವನ್ನು ಸಾರಾ ತಾಯಿ ಟೆರ್ರಿ ಲೀ ಸ್ಪಷ್ಟಪಡಿಸಿದ್ದಾರೆ.
ಸೋಶೀಯಲ್ ಮೀಡಿಯಾದಲ್ಲಿ ತಮ್ಮ ಮಗಳ ಸಾವಿನ ಸುದ್ದಿಯನ್ನು ತಿಳಿಸಿದ್ದಾರೆ.
2015ರಲ್ಲಿ ಡಬ್ಲ್ಯೂ ಡಬ್ಲ್ಯೂ ಈ ರಿಯಾಲಿಟಿ ಸ್ಪರ್ಧೆಯಲ್ಲಿ ಟಫ್ ಎನಫ್ ಸಿರೀಸ್ ನಲ್ಲಿ ಚಾಂಪಿಯನ್ ಆಗಿದ್ದರು.

ಸಾರಾ ಲೀ ಅವರ ನಿಧನಕ್ಕೆ ಡಬ್ಲ್ಯೂ ಡಬ್ಲ್ಯೂಈ ಸಂತಾಪ ಸೂಚಿಸಿದೆ.
ಮಹಿಳಾ ಕ್ರೀಡಾಕಾರರಲ್ಲಿ ಸಾಕಷ್ಟು ಮಂದಿಗೆ ಸಾರಾ ಸ್ಪೂರ್ತಿಯಾಗಿದ್ದರು.
ಡಬ್ಲ್ಯೂ ಡಬ್ಲ್ಯೂ ಈ ಮಹಿಳಾ ರೆಜ್ಲರ್ ಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.