Yadagiri | ಮಳೆಗೆ ಬೆಳೆ ನಾಶ.. ರೈತ ಆತ್ಮಹತ್ಯೆ
ಯಾದಗಿರಿ : ಬಿಟ್ಟು ಬಿಡದೇ ಸುರಿದ ಮಳೆಗೆ ಬೆಳೆ ನಾಶವಾಗಿದ್ದು, ಇದರಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಡಗೇರಾ ತಾಲೂಕಿನ ಕಂದಳ್ಳಿ ಬ್ರೇಡ್ಜ್ ಬಳಿ ನಡೆದಿದೆ.
ಬಸವರಾಜ ಕುಂಭಾರ ಆತ್ಮಹತ್ಯೆ ಮಾಡಿಕೊಂಡ ರೈತ.
ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

ಇದರಲ್ಲಿ ಬಸವರಾಜ ಕಂಭಾರ ಬೆಳೆದ ಹತ್ತಿ ಬೆಳೆ ಕೂಡ ನಾಶವಾಗಿದೆ.
ಇದರಿಂದ ಮನನೊಂದ ಬಸವರಾಜ ಕುಂಭಾರ ಭೀಮಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ರೈತರ ಮೃತದೇಹಕ್ಕಾಗಿ ಎನ್ ಡಿಆರ್ ಎಫ್ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.