Yakshagana | ಗಜರಾಜನ ಮೇಲೇರಿ ರಂಗಸ್ಥಳ ಪ್ರವೇಶಿಸಿದ ದೇವೇಂದ್ರ
ಉಡುಪಿ : ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನ ಯಾವತ್ತೂ ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಲೇ ಇರುತ್ತದೆ.
ಇದೇ ಕಾರಣಕ್ಕೆ ಯಕ್ಷಗಾನ ಇವತ್ತಿಗೂ ಜೀವಂತವಾಗಿದೆ. ಇಂತಹ ಅಪರೂಪದ ಪ್ರಯತ್ನ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆಯಿತು.
ಪ್ರಸಿದ್ಧವಾದ ಅಮರಾವತಿಯ ಅಮರಚರಿತ್ರೆ ಎಂಬ ಪ್ರಸಂಗದಲ್ಲಿ ದೇವೇಂದ್ರ ವೇಷಧಾರಿಯು ನಿಜವಾದ ಗಜರಾಜನ ಮೇಲೆ ರಂಗಸ್ಥಳ ಪ್ರವೇಶಿಸಿ ಜನರಲ್ಲಿ ರೋಮಾಂಚನವುಂಟು ಮಾಡಿದ್ದು ವಿಶೇಷವಾಗಿತ್ತು.
ಯಾವತ್ತೂ ಭಾಗವತರ ಹಾಡಿಗೆ ಸೀಮಿತವಾಗಿದ್ದ ಆನೆಯ ಪ್ರವೇಶದ ಕಥನ, ಈ ಪ್ರದರ್ಶನದಲ್ಲಿ ನಿಜವಾದ ಆನೆಯನ್ನು ತರುವ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತು.
ತನ್ನ ಪಟ್ಟದ ಆನೆಯನ್ನು ಏರಿ ಬರುವ ದೇವೇಂದ್ರನ ಅಪರೂಪದ ಚಿತ್ರಣ ಯಕ್ಷಗಾನ ಪ್ರೇಕ್ಷಕರಿಗೆ ಇನ್ನಿಲ್ಲದ ಸಂತೋಷ ನೀಡಿತು.
yakshagana amarawathi amaracharitre upudi