Yash ಕಲಾಸೇವೆಗೆ ಕಾಲಿಟ್ಟು 14 ವರ್ಷ – ಚಿತ್ರರಂಗದಲ್ಲಿ 14 ವರ್ಷ ಕಳೆದ ರಾಕಿಂಗ್ ಸ್ಟಾರ್
ಮೊಗ್ಗಿನ ಮನಸ್ಸ ಚಿತ್ರದ ಮೂಲಕ ಕಲಾಸೇವೆಗೆ ಪದಾರ್ಪಣೆ ಮಾಡಿದ ಹುಡುಗ ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಕೆಜಿಎಫ್ ಮೂಲಕ ದೇಶದಲ್ಲಿ ಹೊಸ ಚಾಪು ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷಗಳು ಕಳೆದಿವೆ.
14 ವರ್ಷಗಳ ಹಿಂದೆ ಇದೇ ದಿನ ಮೊಗ್ಗಿನ ಮನಸ್ಸು ಚಿತ್ರ ತೆರೆಕಂಡಿತ್ತು. ಈ ಮೂಲಕ ರಾಧಿಕಾ ಪಂಡಿತ್ ಮತ್ತು ಯಶ ಚಿತ್ರರಂಗಕ್ಕೆ ಯುವ ಪ್ರತಿಭೆಗಳಾಗಿ ಕಾಲಿಟ್ಟಿದ್ದರು. ಅಲ್ಲಿಂದ ಇವರಿಬ್ಬರು ಬೆಳೆದ ಪರಿ ಎಲ್ಲರಿಗೂ ಮಾದರಿ. ಇಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಹೆಸರು ಮಾಡಿದ್ದಾರೆ. ಒಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಕ್ಸಸ್ ಫುಲ್ ಜೋಡಿ ಎಂದೆನಿಸಿಕೊಂಡಿದ್ದಾರೆ.
ಮೊಗ್ಗಿನ ಮನಸ್ಸು’ ಚಿತ್ರಕ್ಕೆ ಶಂಶಾಕ್ ನಿರ್ದೇಶನ ಮಾಡಿದ್ದರು. ಯಶ್, ರಾಧಿಕಾ ಪಂಡಿತ್ ಮಾತ್ರವಲ್ಲದೇ ಶುಭಾ ಪೂಂಜಾ, ಮಾನಸಿ, ರಾಜೇಶ್ ನಟರಂಗ ಮುಂತಾದವರು ಅಭಿನಯಿಸಿದ್ದರು.
14 ವರ್ಷಗಳಲ್ಲಿ ಯಶ್ ಸಾಕಷ್ಟು ಏಳು ಬೀಳುಗಳನ್ನ ನೋಡಿದ್ದಾರೆ, ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮೂಲಕ ಯಶ್ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಬೆಳೆದಿದ್ದಾರೆ. ಯಶ್ ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷ ಕಳೆದಿರುವ ಸಂಭ್ರಮಕ್ಕೆ ಅಭಿಮಾನಿಗಳು ಟ್ವೀಟರ್ ನಲ್ಲಿ ಟ್ರೆಂಟ್ ಕ್ರಿಯೇಟ್ ಮಾಡಿದ್ದಾರೆ. ಹಲವು ಹಿತೈಷಿಗಳು ಶುಭ ಕೋರಿದ್ದಾರೆ.
Yash – 14 years of Yashism, trending on Twitter, updates on his career and movies