ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ : ‘ರಾಕಿ’ಯಿಂದ – ‘ರಾಮಾಚಾರಿ’- ಕೆಜಿಎಫ್ ನ ‘ ರಾಖಿಭಾಯ್’ ವರೆಗಿನ ಜರ್ನಿ..!
yash 36th birthday
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ… ಕೋವಿಎ ಇರದೇ ಇದ್ದಿದ್ದರೆ ಇಷ್ಟೊತ್ತಿಗೆ ಯಶ್ ಅಭಿಮಾನಿಗಳು ದೊಡ್ಡ ಜಾತ್ರೆಯಂತೆಯೇ ಅದ್ಧೂರಿಯಾಗೆ ರಾಖಿ ಭಾಯ್ ಬರ್ತ್ ಡೇ ಸೆಲೆಬ್ರೇಟ್ ಮಾಡ್ತಿದ್ರು..
ಆದ್ರೆ ಕೊರೊನಾ ಹಾವಳಿಯಿಂದಾಗಿ ಯಶ್ , ಫ್ಯಾಮಿಲಿ ಮತ್ತು ಆಪ್ತರೊಂದಿಗೆ ಸರಳ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಯಶ್ ಜಾತ್ರೆ ಆರಂಭಿಸಿದ್ದಾರೆ ಅಭಿಮಾನಿಗಳು , ಕಾಮನ್ ಡಿಪಿ ರಿಲೀಸ್ ಮಾಡಲಾಗಿದೆ.. ಮತ್ತೊಂದೆಡೆ ಹ್ಯಾಪಿ ಬರ್ತ್ ಡೇ ಯಶ್ ಟ್ರೆಂಡ್ ಆಗ್ತಿದೆ.. ಯಶ್ ಅವರಿಗೆ ಸಿನಿಮಾ ಸೆಲೆಬ್ರಿಟಿಗಳು , ಗಣ್ಯರು ಸಹ ವಿಷ್ ಮಾಡ್ತಾಯಿದ್ದಾರೆ..
ಕೆಜಿಎಫ್ ಸಿನಿಮಾ ಮೂಲಕ ಭಾರತದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ರಾಖಿ ಭಾಯ್ ಕ್ರೇಜ್ ವಿದೇಶಗಳಲ್ಲೂ ಪಸರಿಸಿದೆ.. ಅಂದ್ಹಾಗೆ ಕೆಜಿಎಫ್ 2 ಸಿನಿಮಾಗಾಗಿ ಅಭಿಮಾನಿಗಳು ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.. ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗಬೇಕಿದೆ.. ಆದ್ರೆ ಕೊರೊನಾ ಹಾವಳಿ ಹೀಗೆ ಮುಂದುವರೆದ್ರೆ ರಿಲೀಸ್ ಡೇಟ್ ಮತ್ತೆಬ ಮುಂದೂಡಿಕೆಯಾಗಲೂಬಹುದು..
ಅಂದ್ಹಾಗೆ ‘ರಾಖಿ ಭಾಯ್’ ಮೊದಲಿಗೆ ಕಿರುತೆರೆಗೆ ಎಂಟ್ರಿ ಕೊಟ್ಟರು.. ‘ನಂದ ಗೋಕುಲ’ , ಮುಕ್ತ , ಮಳೆಬಿಲ್ಲು , ಪ್ರೀತಿಯಿಲ್ಲದ ಮೇಲೆ , ಇಂತಹ ಧಾರಾವಾಹಿಗಳಲ್ಲಿ ನಟಿಸಿ , ಬಳಿಕ ಗೋಕುಲದಲ್ಲಿ ಸಹನಟಿಯಾಗಿದ್ದ ರಾಧಿಕಾ ಪಂಡಿತ್ ಅವರ ಜೊತೆಗೆ ‘ಮೊಗ್ಗಿನ ಮನಸ್ಸು’ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡರು.. ಸಿನಿಮಾದಲ್ಲಿ ತಮ್ಮ ಅಭಿನಯಕ್ಕೆ ಅವಾರ್ಡ್ ಕೂಡ ಪಡೆದರು..
ಇದಾದ ನಂತರ ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿಯೇ ಸಿನಿಮಾಗಳಿಗೆ ಎಂಟ್ರಿಯಾದ ಅವರು , 2008 ರಲ್ಲಿ ರಾಕಿ , 2009 ರಲ್ಲಿ ಕಳ್ಳರ ಸಂತೆ , 2009 ರಲ್ಲೇ ಗುಲ ಸಿನಿಮಾ, 2010 ರಲ್ಲಿ ಮೊದಲಸಲ, 2011 ರಲ್ಲಿ ರಾಜಧಾನಿ , ಲಕ್ಕಿ , ಜಾನು,
ಕಿರಾತಕ ಸಿನಿಮಾಗಳನ್ನ ಮಾಡಿದರು .. ಈ ಸಿನಿಮಾಗಳೆಲ್ಲವೂ ಸಕ್ಸಸ್ ಕಂಡರೂ ‘ಮಿಸ್ಟರ್ ರಾಮಾಚಾರಿ’ ಗೆ ಮೊದಲ ಬ್ರೇಕ್ ತಂದು ಕೊಟ್ಟ ಸಿನಿಮಾ ಯೋಗರಾಜ್ ಭಟ್ ಅವರ ‘ಡ್ರಾಮಾ’.. ವಿಭಿನ್ನ ಕಥೆಯಾಧಾರಿತ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.. ಇದೇ ಸಿನಿಮಾ ಮೂಲಕ ‘ಕಿರಾತಕ’ನಿಗೆ ಮೊದಲ ಬ್ರೇಕ್ ಸಿಕ್ಕಿತ್ತು..
ಈ ಸಿನಿಮಾ 2012 ರಲ್ಲಿ ಸೂಪರ್ ಹಿಟ್ ಆಗಿ ಹೊರಹೊಮ್ಮಿತ್ತು.. ಇದಾದ ನಂತರ ಯಶ್ ಇನ್ನಷ್ಟು ಪಾಪ್ಯುಲರ್ ಆಗಿ ಅವರ ಕ್ರೇಜ್ ಹೆಚ್ಚಿಸಿದ ಸಿನಿಮಾ ಅಂದ್ರೆ ಅದು ಗೂಗ್ಲಿ.. ಪವನ್ ಒಡೆಯರ್ ನಿರ್ದೇಶನದ ಈ ಸಿನಿಮಾ 2013 ರಲ್ಲಿ ರಿಲೀಸ್ ಆಗಿ ಥಿಯೇಟರ್ ಗಳಲ್ಲಿ ಅಬ್ಬರಿಸಿತ್ತು.. ಆ ವರ್ಷ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಒಂದಾಗಿತ್ತು..
2014 ರಲ್ಲಿ ಯಶ್ ಅವರ ಗಜಕೇಸರಿ ಸಿನಿಮಾ ಕೂಡ ಸೂಪರ್ ಹಿಟ್ ಆಗಯಿತು.. ಇದಾದ ಮೇಲೆ 2014 ರಲ್ಲಿಯೇ ರಿಲೀಸ್ ಆದ ‘ ಇಂಡಸ್ಟ್ರಿಯಲ್ ಹಿಟ್ ಸಿನಿಮಾ ಮಿಸ್ಟರ್
ಅಂಡ್ ಮಿಸಸ್ ರಾಮಾಚಾರಿ ‘ ಯಶ್ ರೇಂಜ್ ನೇ ಬದಲಾಯಿಸಿದ ಸಿನಿಮಾವಾಗಿ ಹೊರಹೊಮ್ಮಿತು.. ಈ ಸಿನಿಮಾ ಕಮರ್ಷಿಲ್ ಹಿಟ್ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ ನಂತರ , ಯಶ್ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಯಾಂಡಲ್ ವುಡ್ ನಟರ ಪೈಕಿ ಒಬ್ಬರಾದ್ರು.. ಇದಾದ ನಂತರ ಯಶ್ ಯಶ್ ಅನ್ನೋಕಿಂತ , ಸ್ಯಾಂಡಲ್ ವುಡ್ ನ ರಾಮಾಚಾರಿ ಅಂತಲೇ ಫೇಮಸ್ ಆದ್ರು..
ನಂತರ ಮಾಸ್ಟರ್ ಪೀಸ್ , ಸಂತೂ ಸ್ಟ್ರೈಟ್ ಫಾರ್ವರ್ಡ್ ಸಿನಿಮಾಗಳು ಕೂಡ ಕಮರ್ಷಿಲ್ ಹಿಟ್ ಎನಿಸಿಕೊಂಡವು.. ಆದ್ರೆ ಯಶ್ ನ ಪ್ಯಾನ್ ಇಂಡಿಯಾ ಲೆವೆಲ್ ಗೆ ಕೊಂಡೊಯ್ದು ಭಾರತದ ಬಿಗ್ ಸ್ಟಾರ್ ಆಗಿ ಅವರಿಗೆ ಗುರುತು ನೀಡಿ , ಪರ ಬಾಷಾಭಿಮಾನಿಗಳು ರಾಖಿ ಭಾಯ್ ಅಂತ ಜಪ ಮಾಡುವಂತೆ ಮಾಡಿದ ಸಿನಿಮಾ ಅಂದ್ರೆ , ಅದು ಪ್ರಶಾಂತ್ ನೀಲ್ ಅವರ ಕೆಜಿಎಫ್ ಸಿನಿಮಾ..
ಕನ್ನಡ , ತೆಲುಗು ಸೇರಿದಂತೆ , ಒಟ್ಟು 5 ಭಾಷೆಗಳಲ್ಲಿ ರಿಲೀಸ್ ಆದ ಈ ಸಿನಿಮಾ , ಬಾಹುಬಲಿ ರೇಂಜ್ ಗೆ ಸೌಂಡ್ ಮಾಡಿ ಬಾಲಿವುಡ್ ಮಂದಿಯನ್ನ ಬೆಚ್ಚಿ ಬೀಳಿಸಿತ್ತು.. ಅಷ್ಟೇ ಅಲ್ಲ ಕೆಜಿಎಫ್ ಮುಂದೆ ಬಾಲಿವುಡ್ ನ ಬಾದ್ ಷಾ ಶಾರುಖ್ ಖಾನ್ ಅಭಿನಯದ ಝೀರೋ ಸಿನಿಮಾ ಕೂಡ , ಝೀರೋದಂತೆಯೇ ಫ್ಲಾಪ್ ಆಗಿ ಹೋಯ್ತು… ಈ ಸಿನಿಮಾದ ಕ್ರೇಜ್ ವಿದೇಶಿಗರನ್ನೂ ಸೆಳೆದಿದ್ದು , ಪ್ರಸ್ತುತ ಕೆಜಿಎಫ್ 2 ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ..