Yash Dayal | ಹಾರ್ದಿಕ್ ಪಾಂಡ್ಯ ಅದ್ಭುತ ಕ್ಯಾಪ್ಟನ್
ಗುಜರಾತ್ ಟೈಟಾನ್ಸ್ ತಂಡದ ವೇಗಿ ಯಶ್ ದಯಾಳ್ ತಮ್ಮ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಹಾಡಿ ಹೊಗಳಿದ್ದಾರೆ.
ಪಾಂಡ್ಯ ಅತ್ಯುತ್ತಮ ನಾಯಕ ಎಂದು ಯಶ್ ದಯಾಳ್ ಹೇಳಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಅದೇ ರೀತಿ ಹಾರ್ದಿಕ್ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ತಂಡದ ಉಪನಾಯಕರಾಗಿದ್ದಾರೆ. ಹಾರ್ದಿಕ್ ಐಪಿಎಲ್ ಚೊಚ್ಚಲ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಆಗಿ ಮಾಡಿದ್ದಾರೆ.
“ಹಾರ್ದಿಕ್ ಪಾಂಡ್ಯ ತುಂಬಾ ಶಾಂತವಾಗಿರುತ್ತಾರೆ. ಪಂದ್ಯದ ಯಾವುದೇ ಹಂತದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಅವರಿಗೆ ಗೊತ್ತಿದೆ.

ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೇ ಹಾರ್ದಿಕ್ ನಮ್ಮನ್ನು ಬೆಂಬಲಿಸುತ್ತಾರೆ. ಇದು ಬೌಲರ್ ಗಳಲ್ಲಿ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ನಾನು ಇಲ್ಲಿಯವರೆಗೂ ಆಡಿದ ನಾಯಕರಲ್ಲಿ ಹಾರ್ದಿ್ಕ ಅದ್ಭುತ ನಾಯಕರಾಗಿದ್ದಾರೆ ಎಂದು ಯಶ್ ದಾಯಾಳ್ ಹೇಳಿದ್ದಾರೆ.
ಅದೇ ರೀತಿ ಆಶಿಶ್ ನೆಹ್ರಾ ಮೊದಲಿನಿಂದಲೂ ನನಗೆ ತುಂಬಾ ಬೆಂಬಲ ನೀಡುತ್ತಿದ್ದರು. ಟೂರ್ನಿ ಆರಂಭಕ್ಕೂ ಮುನ್ನ ನನ್ನ ಬೌಲಿಂಗ್ ನಲ್ಲಿ ನಾನಾ ಪ್ರಯೋಗಗಳನ್ನು ಮಾಡುತ್ತಿದ್ದೆ. ಆದರೆ ಆಶಿಶ್ ಸರ್ ನನಗೆ ಒಂದು ಸಲಹೆ ನೀಡಿದರು ಎಂದು ಯಶ್ ದಯಾಳ್ ಹೇಳಿದರು.








