Yash Dayal : ಗಿಲ್, ಸಹಾ, ಮಿಲ್ಲರ್ ಬಗ್ಗೆ ಯಶ್ ಹೇಳಿದ್ದೇನು..?
ಶುಭ್ ಮನ್ ಗಿಲ್ ನೆಟ್ಸ್ ಗಳಲ್ಲಿ ನನಗೆ ಸಾಕಷ್ಟು ತೊಂದರೆ ನೀಡಿದ್ದು, ನಾನು ಎದುರಿಸಿದ ಕಠಿಣವಾದ ಬ್ಯಾಟ್ಸ್ ಮೆನ್ ಆತನೇ ಎಂದು ಗುಜರಾತ್ ಟೈಟಾನ್ಸ್ ತಂಡದ ಯುವ ಬೌಲರ್ ಯಶ್ ದಯಾಲ್ ತಿಳಿಸಿದ್ದಾರೆ. ಗಿಲ್ ಕ್ಲಾಸಿಕಲ್ ಬ್ಯಾಟರ್ ಎಂದು ಪ್ರಶಂಸೆಗಳನ್ನು ಸುರಿಸಿದ್ದಾರೆ.
IPL-2022 ಮೆಗಾ ಹರಾಜಿನಲ್ಲಿ ಉತ್ತರ ಪ್ರದೇಶ ಮೂಲದ ಅನ್‌ಕ್ಯಾಪ್ಡ್ ಆಟಗಾರ ಯಶ್ ದಯಾಲ್ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ 3.20 ಕೋಟಿಗೆ ಖರೀದಿ ಮಾಡಿದೆ.
ಈ ಸೀಸನ್ ನಲ್ಲಿ 9 ಪಂದ್ಯಗಳನ್ನಾಡಿರುವ ಯಶ್ ಒಟ್ಟು 11 ವಿಕೆಟ್ ಪಡೆದು ಓಕೆ ಎನಿಸಿದರು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಫೈನಲ್‌ನಲ್ಲಿ ಅವರು ಒಂದು ವಿಕೆಟ್ ಪಡೆದರು.
ರಾಜಸ್ಥಾನದ ಆರಂಭಿಕ ಆಟಗಾರ ಯಶಸ್ವಿ ಜೈಶ್ವಾಲ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿ ಗುಜರಾತ್ ಗೆ ಉತ್ತಮ ಆರಂಭ ನೀಡಿದರು. ಆ ಮೂಲಕ ಚೊಚ್ಚಲ ಪ್ರಶಸ್ತಿ ಗೆದ್ದ ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಈ ನಡುವೆ ಇಂಡಿಯಾ ನ್ಯೂಸ್ ಜೊತೆ ತಮ್ಮ ಐಪಿಎಲ್-2022 ಅನುಭವಗಳನ್ನು ಯಶ್ ದಯಾಳ್ ಹಂಚಿಕೊಂಡಿದ್ದು, ತಮಗೆ ತೊಂದರೆ ನೀಡಿದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡಿದ್ದಾರೆ.
ನೆಟ್ಸ್‌ನಲ್ಲಿ ಶುಭ್‌ಮನ್ ಗಿಲ್ ಅವರನ್ನು ಎದುರಿಸುವುದು ತುಂಬಾ ಕಷ್ಟ. ಯಾವುದೇ ಹೊಡೆತವನ್ನು ತಡಮಾಡದೆ ಹೊಡೆಯುವ ಅಭ್ಯಾಸ ಇವರದ್ದು. ಅದ್ಭುತ ಶಾಟ್ಸ್ ಆಡುತ್ತಾರೆ. ಆತ “ಕ್ಲಾಸಿಕಲ್ ಬ್ಯಾಟರ್” ಎಂದು ಶ್ಲಾಘಿಸಿದ್ದಾರೆ.
ಅದೇ ರೀತಿ ವೃದ್ಧಿಮಾನ್ ಸಹಾ ಕ್ರೀಸ್‌ನಲ್ಲಿದ್ದರೇ ಅವರನ್ನ ತಡೆಯೋದು ತುಂಬಾ ಕಷ್ಟ, ಪವರ್‌ಪ್ಲೇಯಲ್ಲಿ ಅವರನ್ನು ಎಚ್ಚರಿಕೆಯಿಂದ ಎದುರಿಸಬೇಕು ಎಂದು ಯಶ್ ದಯಾಳ್ ಹೇಳಿದ್ದಾರೆ.
ಡೇವಿಡ್ ಮಿಲ್ಲರ್ ಕೂಡ ಅಪಾಯಕಾರಿ ಬ್ಯಾಟರ್ ಎಂದು ಹೇಳಿಕೊಂಡಿದ್ದಾರೆ. ಇನ್ನು ಎದುರಾಳಿ ತಂಡದ ಬ್ಯಾಟರ್ ಗಳಲ್ಲಿ ರುತುರಾಜ್ ಗಾಯಕ್ವಾಡ್, ಬಟ್ಲರ್ ಅವರನ್ನು ಎದುರಿಸುವುದು ಕಷ್ಟಕರವಾಗಿತ್ತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.







