ಯಶ್ ಧೂಳ್ ಇತಿಹಾಸ.. ಬೀಸ್ಟ್ ಚರಿತ್ರೆ.. ನಾನ್ ಜಗ್ಗಲ್ಲ ಎಂದ ಈಶ್ವರಪ್ಪ
01 . ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರಪ್ಪ, ಕಾಂಗ್ರೆಸ್ ನಾಯಕರ ಹೋರಾಟಕ್ಕೆಲ್ಲಾ ನಾನು ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ. ನಾನು ದೇಶದ ಹಿತದೃಷ್ಠಿಯಿಂದ ಹೇಳಿಕೆ ನೀಡಿದ್ದೆ. ರಾಷ್ಟ್ರ ಧ್ವಜ ತಾಯಿ ಸಮಾನ ಎಂದು ತಿರುಗೇಟು ನೀಡಿದ್ದಾರೆ.
Eshwarappa | ಕಾಂಗ್ರೆಸ್ ಹೋರಾಟಕ್ಕೆ ನಾನು ಜಗ್ಗಲ್ಲ, ಬಗ್ಗಲ್ಲ
02 . ಸಿಂಧೂರ, ಹಿಜಾಬ್ ಎರಡೂ ನಮ್ಮ ಸಂಸ್ಕೃತಿ ಮತ್ತು ನಂಬಿಕೆ. ಕುಂಕುಮ ಇಡುವುದರಿಂದ – ಹಿಜಾಬ್ ಧರಿಸುವುದರಿಂದ ಯಾರಿಗೂ ತೊಂದರೆ ಇಲ್ಲ. ಯಾರದೋ ಷಡ್ಯಂತ್ರಕ್ಕೆ ನಮ್ಮ ಸಂಸ್ಕೃತಿ ಮತ್ತು ನಂಬಿಕೆಗಳು ಬಲಿಯಾಗಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
Siddaramaiah | ಸಿಂಧೂರ, ಹಿಜಾಬ್ ನಮ್ಮ ಸಂಸ್ಕೃತಿ & ನಂಬಿಕೆ
03. ದಳಪತಿ ವಿಜಯ್, ಪೂಜಾ ಹೆಗ್ಡೆ ಅಭಿನಯದ ಚಿತ್ರ ಬೀಸ್ಟ್. ಈ ಸಿನಿಮಾ ತಂಡದಿಂದ ಇತ್ತೀಚೆಗೆ ರಿಲೀಸ್ ಆದ ಅರೇಬಿಕ್ ಸಾಂಗ್ ಸೋಶಿಯಲ್ ಮೀಡಿಯಾವನ್ನ ಶೇಕ್ ಮಾಡುತ್ತಿದೆ. ಸಾಂಗ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ಸ್ ವೀವ್ಸ್ ಪಡೆದುಕೊಂಡಿತ್ತು. ಇದರೊಂದಿಗೆ ಅರೇಬಿಕ್ ಕುತು ಹಾಡು, ಪಾನ್ ವರ್ಲ್ಡ್ ಸಾಂಗ್ ಆಗಿ ಸೋಷಿಯಲ್ ಮೀಡಿಯಾವನ್ನ ನಡುಗಿಸುತ್ತಿದೆ.
Beast Song | ಪ್ಯಾನ್ ಇಂಡಿಯಾ ಅಲ್ಲ.. ಪ್ಯಾನ್ ವರ್ಲ್ಡ್ ಸಾಂಗ್..!!
04. ಅಂಡರ್-19 ವಿಶ್ವಕಪ್ ಹೀರೋ ಯಶ್ ಧೂಳ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಚೊಚ್ಚಲ ರಣಜಿ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ಯಶ್ ಶತಕ ಸಿಡಿಸಿದ್ದಾರೆ. ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ದೆಹಲಿ ಮತ್ತು ತಮಿಳುನಾಡು ಮುಖಾಮುಖಿಯಾಗಿದ್ದವು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಆದರೆ, ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಯಶ್ ಧುಲ್ ಎರಡನೇ ಇನ್ನಿಂಗ್ಸ್ ನಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ.
Yash Dull | ಚರಿತ್ರೆ ಸೃಷ್ಟಿಸಿದ ಯಶ್ ಧೂಳ್
05 . ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್, ನಿವೃತ್ತಿ ಬಗ್ಗೆ ಯೋಚಿಸುವಂತೆ ಸಲಹೆ ನೀಡಿರುವುದಾಗಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ತಿಳಿಸಿದ್ದಾರೆ. ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಹಾ ಅವರನ್ನ ಬಿಸಿಸಿಐ ಪರಿಗಣಿಸಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ಸಹಾ ಅಸಮಾಧಾನ ಹೊರಹಾಕಿದ್ದಾರೆ.
Wriddhiman saha | ಸಹಾಗೆ “ವಿದಾಯ”ದ ಸಲಹೆ ಕೊಟ್ಟ ದ್ರಾವಿಡ್..!!
Yash dull talapati vijay rahul dravid Siddaramaiah Eshwarappa








