ಎಚ್ಚರಿಕೆ, ಮುಂದೆ ಅಪಾಯವಿದೆ.. ಯಶ್ ಕೆಜಿಎಫ್ -2 ಪೋಸ್ಟರ್ ರಿಲೀಸ್

1 min read
yash kgf chapter 2 new poster out saaksha tv

ಎಚ್ಚರಿಕೆ, ಮುಂದೆ ಅಪಾಯವಿದೆ.. ಯಶ್ ಕೆಜಿಎಫ್ -2 ಪೋಸ್ಟರ್ ರಿಲೀಸ್

ರಾಕಿಂಗ್​ ಸ್ಟಾರ್​’ ಯಶ್​  ಅವರಿಗೆ ಇಂದು  ಹುಟ್ಟುಹಬ್ಬದ ಸಂಭ್ರಮ

‘ಕೆಜಿಎಫ್​: ಚಾಪ್ಟರ್​ 2’  ಸಿನಿಮಾದಿಂದ ಹೊಸ ಪೋಸ್ಟರ್​ ಬಿಡುಗಡೆ

ಇಂದು ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ. 36ನೇ ವಸಂತಕ್ಕೆ ಕಾಲಿಟ್ಟಿರುವ ಯಶ್ ಗೆ ಸೋಶಿಯಲ್ ಮೀಡಿಯಾ ಮೂಖೇನ ಸ್ನೇಹಿತರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಇನ್ನು ನಿರೀಕ್ಷೆಯಂತೆ  ಅಭಿಮಾನಿಗಳ ಆಸೆಯಂತೆಯೇ ಯಶ್​ ಜನ್ಮದಿನದ  ಪ್ರಯುಕ್ತ ‘ಕೆಜಿಎಫ್​: ಚಾಪ್ಟರ್​ 2’  ಸಿನಿಮಾದಿಂದ ಹೊಸ ಪೋಸ್ಟರ್​ ಬಿಡುಗಡೆ ಆಗಿದೆ.

ಬೆಳಗ್ಗೆ 9 ಗಂಟೆಗೆ ಪೋಸ್ಟರ್​ ರಿಲೀಸ್​ ಮಾಡುವುದಾಗಿ ಚಿತ್ರತಂಡ ಒಂದು ದಿನ ಮುಂಚಿತವಾಗಿ ಘೋಷಿಸಿತ್ತು.

ಅದರಂತೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಅಲ್ಲದೆ  #KGF2onApr14 ಎಂಬ ಹ್ಯಾಶ್​ ಟ್ಯಾಗ್​ ಬಳಸಿದೆ.

ಆ ಮೂಲಕ ರಿಲೀಸ್​ ದಿನಾಂಕದಲ್ಲಿ ಸದ್ಯಕ್ಕಂತೂ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಖಚಿತಪಡಿಸಿದೆ.

ಇನ್ನು ಪೋಸ್ಟರ್ ನಲ್ಲಿ ಎಚ್ಚರಿಕೆ, ಮುಂದೆ ಅಪಾಯವಿದೆ ಅಂತಾ ಬೋರ್ಡ್ ಇದೆ. ಬೋರ್ಡ್ ನ ಹಿಂದೆ ರಗಡ್ ಲುಕ್ ನಲ್ಲಿ ರಾಕಿ ಭಾಯ್ ನಿಂತಿದ್ದಾರೆ.

ಸದ್ಯ ಈ ಪೋಸ್ಟರ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುತ್ತಿದ್ದು, ಯಶ್ ಅಭಿಮಾನಿಗಳ ಸ್ಪೇಟಸ್ ತುಂಬಿಕೊಂಡಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd