ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ. ಬಿಜೆಪಿಯಿಂದ ಉಚ್ಚಾಟನೆಯಾದ ಬಳಿಕ, ಅವರು ತಮ್ಮ ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.
ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ
ನಾನು ಬಿಜೆಪಿಗೆ ಮರಳಲು ಅಂಗಲಾಚುವುದಿಲ್ಲ. ಪಕ್ಷದ ಸಂಘಟನೆ ಕಚೇರಿಗೆ ಹೋಗಿ ಕ್ಷಮೆ ಕೇಳೋದು ನನ್ನ ಸ್ವಭಾವವಲ್ಲ, ಎಂದು ಕಟುವಾಗಿ ಯತ್ನಾಳ್ ಹೇಳಿದ್ದಾರೆ.
ವಿಜಯೇಂದ್ರ ಅಧ್ಯಕ್ಷರಾಗಿದ್ರೆ ಬಿಜೆಪಿ ಅವನತಿಯ ಹಾದಿ ಹಿಡಿಯುತ್ತದೆ
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರನ್ನು ಮುಂದುವರಿಸಿದರೆ, ಪಕ್ಷವು ಅವನತಿಯ ಹಾದಿಗೆ ಹೋಗುತ್ತೆ ಎಂಬ ಭವಿಷ್ಯವನ್ನು ಯತ್ನಾಳ್ ನುಡಿದ್ದಾರೆ. ವಿಜಯೇಂದ್ರ ಬದಲು, ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂಬುದು ನನ್ನ ಅಭಿಪ್ರಾಯ, ಎಂದು ಅವರು ಹೇಳಿದ್ದಾರೆ.
ಹೊಸ ರಾಜಕೀಯ ಪಕ್ಷದ ಕನಸು?
ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮದೇ ಹೊಸ ರಾಜಕೀಯ ಪಕ್ಷ ಕಟ್ಟಲು ತೀರ್ಮಾನಿಸಬಹುದೆಂದು ರಾಜಕೀಯ ವಲಯದಲ್ಲಿ ಮಾತುಗಳಿವೆ. ಹೊಸ ಪಕ್ಷ ಸ್ಥಾಪನೆಗೆ ನಾನು ಸಿದ್ಧನಿದ್ದೇನೆ. ಬಡವ, ಹಿಂದುಳಿದ ವರ್ಗದ ಜನರಿಗಾಗಿ ಕಾರ್ಯನಿರ್ವಹಿಸುವ ಪಕ್ಷವೇ ನನ್ನ ಗುರಿ, ಎಂದು ಯತ್ನಾಳ್ ಹೇಳಿದ್ದಾರೆ.
ಯತ್ನಾಳ್ ಅವರ ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಯತ್ನಾಳ್ ನೇತೃತ್ವದಲ್ಲಿ ಹೊಸ ರಾಜಕೀಯ ವೇದಿಕೆ ಉದಯವಾಗಬಹುದೇ ಎಂಬ ಕುತೂಹಲ ಶುರುವಾಗಿದೆ.








