ವಿಜಯಪುರ: ಮಾಜಿ ಸಿಎಂ ಯಡಿಯೂರಪ್ಪಗೆ ಅವರ ಮಗ ಬಿವೈ ವಿಜಯೇಂದ್ರ ಹೊರಗಡೆ ಮಾತ್ರ ಪೂಜ್ಯ ತಂದೆ ಅಂತಾನೆ. ಆದರೆ, ಮನೆಯಲ್ಲಿ ಮುದಿಯಾ ಅಂತಾನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಅವರ ಮಗ ವಿಜಯೇಂದ್ರ ಮಾಡಿದ ತಪ್ಪಿನಿಂದ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂತು. ಅಪ್ಪನ ಸಹಿ ಪೋರ್ಜರಿ ಮಾಡಿದ್ದ. ಯಡ್ಡಿಯೂರಪ್ಪಗೆ ಅವರ ಮನೆಯಲ್ಲಿಯೇ ಕಿಮ್ಮತ್ತಿಲ್ಲ. ವಿಜಯೇಂದ್ರ ಹೊರಗಡೆ ಮಾತ್ರ ಪೂಜ್ಯ ತಂದೆ ಅಂತಾನೆ. ಆದರೆ, ಮನೆಯಲ್ಲಿ ಮುದಿಯಾ ಅಂತಾ ಕರಿತಾನೆ. ಅವನಿಂದಲೆ ಯಡ್ಡಿಯೂರಪ್ಪ ಹಾಳಾಗಿದ್ದು ಎಂದು ಆರೋಪಿಸಿದ್ದಾರೆ.
ಯಡ್ಡಿಯೂರಪ್ಪ ಕೂಡ ಸಾಕಷ್ಟು ಬಿಜೆಪಿ ನಾಯಕರಿಗೆ ಮೋಸ ಮಾಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಅನೇಕರನ್ನು ಮಣ್ಣಲ್ಲಿಟ್ಟರು. ಇನ್ನು ಯಡ್ಡಿಯೂರಪ್ಪ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕೂಡಲಿ ಎಂದು ಸಲಹೆ ನೀಡಿದ್ದಾರೆ.
ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಲು ಲಾಯಕ್ ಅಲ್ಲ. ಅವನನ್ನ ನಾವ್ಯಾರು ಒಪ್ಪಲ್ಲ, ಅವನು ರಾಜೀನಾಮೆ ಕೊಡಬೇಕು. ಉಡುಪಿ ಸುನೀಲಕುಮಾರ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದರು.








