ಸರ್ಕಾರಿ ಉದ್ಯೋಗಿಗಳಿಗೆ “ಯೋಗ ಬ್ರೇಕ್” : ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ
ನವದೆಹಲಿ : ಯೋಗದ ಮಹತ್ವ ಗೊತ್ತಿಲ್ಲದವರು ಯಾರೂ ಇಲ್ಲ.. ಯೋಗ ಕೇವಲ ಮಾನಸಿಕ ಅಷ್ಟೇ ಅಲ್ಲ ದೈಹಿಕವಾಗಿಯೂ ನಮ್ಮನ್ನ ಫಿಟ್ ಆಗಿರುಸತ್ತೆ. ಹೀಗಾಗಿಯೇ ಫಿಟ್ ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಇಂದ ಹಿಡಿದು ಬಹುತೇಕ ಸ್ಟಾರ್ ಗಳು ಯೋಗ ಮೊರೆ ಹೋಗಿರೋದು.. ಆದ್ರೆ ಇದೀಗ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಕೆಲಸದ ನಡುವೆ 5 ನಿಮಿಷಗಳ ಯೋಗ ಬ್ರೇಕ್ ಘೋಶಿಸಿದೆ.
ಹೌದು… ಅಲ್ಲದೇ ಯೋಗದ ವಿಧಾನಗಳು ಮತ್ತು ಪ್ರಯೋಜನಗಳನ್ನು ಸೆಟದ್ ಮಾಡಿರುವ ಆಪ್ ಡೌನ್ ಲೋಡ್ ಮಾಡಿಕೊಳ್ಳುವಂತೆಯೇ ಎಲ್ಲಾ ಸರ್ಕಾರಿ ಉದ್ಯೋಗಿಗಳಿಗೆ ಸೂಚಿಸಲಾಗಿದೆ. ಈ ಆಪ್ ಅನ್ನು ಆಯುಷ್ ಸಚಿವಾಲಯ ಅಭಿವೃದ್ಧಿಪಡಿಸಿದೆ. ಅಂದ್ಹಾಗೆ ಸರ್ಕಾರವು ಸೆಪ್ಟೆಂಬರ್ 2ರಂದೇ ಈ ಆದೇಶವನ್ನ ಹೊರಡಿಸಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ), ಎರಡು ದಿನಗಳ ಹಿಂದೆ ಹೊರಡಿಸಿದ ಆದೇಶದಲ್ಲಿ, ಈ ಆಪ್ ಅನ್ನು ಪ್ರಚಾರ ಮಾಡಲು ಎಲ್ಲಾ ಸಚಿವಾಲಯಗಳನ್ನು ಕೇಳಿದೆ. ಆ ಆದೇಶದಲ್ಲಿ ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ವೈ- ಬಳಕೆಯನ್ನು ಉತ್ತೇಜಿಸಲು ವಿನಂತಿಸಲಾಗಿದೆ. ಡಿಒಪಿಟಿ, ಸೆಪ್ಟೆಂಬರ್ 2 ರಂದು ಹೊರಡಿಸಿದ ಆದೇಶದಲ್ಲಿ, ಆಂಡ್ರಾಯ್ಡ್ ಆಧಾರಿತ ವೈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ಹೇಳಿದೆ. 2019 ರಲ್ಲಿ ತಜ್ಞರ ಸಮಿತಿಯ ಮೂಲಕ ಈ ಆಪ್ ಅನ್ನು ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ ಎಂದು ಸಚಿವಾಲಯವು ತಿಳಿಸಿದೆ.