ಯೋಗವೆನ್ನುವುದು ದೈಹಿಕ- ಮಾನಸಿಕ ಸ್ವಾಸ್ಥ್ಯಕ್ಕೂ ಅದ್ಭುತ ಕ್ರಿಯಾ ಸಾಧನ:ಬಿ.ಸಿ.ಪಾಟೀಲ್

1 min read

ಯೋಗವೆನ್ನುವುದು ದೈಹಿಕ- ಮಾನಸಿಕ ಸ್ವಾಸ್ಥ್ಯಕ್ಕೂ ಅದ್ಭುತ ಕ್ರಿಯಾ ಸಾಧನ:ಬಿ.ಸಿ.ಪಾಟೀಲ್

ಯೋಗ ಎನ್ನುವುದು ಬರೀ ದೇಹದ ದಂಡನೆಯಲ್ಲ,ಇದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ವಾಸ್ಥ್ಯಕ್ಕೂ ಅದ್ಭುತ ಕ್ರಿಯಾ ಸಾಧನ ಎಂದು ಕೃಷಿ ಸಚಿವರೂ ಆಗಿರುವ ಗದಗ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ‌ ಬಿ.ಸಿ.ಪಾಟೀಲ್ ಹೇಳಿದರು.

ಅಂಗವಾಗಿ ಹಾವೇರಿ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ,ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಇವರ ಸಹಯೋಗದಲ್ಲಿ “ಆಜಾದಿ ಕಾ ಅಮೃತ್ ಮಹೋತ್ಸವ್ ” ಹಿರೇಕೆರೂರಿನ ಅಬಲೂರು ಗ್ರಾಮದ ಬಸವೇಶ್ವರ ದೇವಸ್ಥಾನದ ಮೈದಾನದ ಆವರಣದಲ್ಲಿ ನಡೆದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಅಂತಾರಾಷ್ಟ್ರೀಯ ಯೋಗ‌ ದಿನಾಚರಣೆಯ ಶುಭಾಶಯ ಕೋರಿದ ಸಚಿವರು,ಪ್ರಧಾನಿ ನರೇಂದ್ರ ಮೋದಿಯವರು ಹೇಳವಂತೆ ಈ ಇಡೀ ವಿಶ್ವವು ನಮ್ಮ ದೇಹ ಮತ್ತು ಆತ್ಮದಿಂದ ಆರಂಭವಾಗುತ್ತದೆ . ವಿಶ್ವವು ನಮ್ಮಿಂದ ಪ್ರಾರಂಭವಾಗುತ್ತದೆ ಮತ್ತು ಯೋಗವು ನಮ್ಮೊಳಗಿನ ಎಲ್ಲವನ್ನೂ ಜಾಗೃತಗೊಳಿಸುತ್ತದೆ ಮತ್ತು ಅರಿವಿನ ಪ್ರಜ್ಞೆಯನ್ನು ನಿರ್ಮಿಸುತ್ತದೆ.ಈ ಬಾರಿ ಮಾನವೀಯತೆಗಾಗಿ ಯೋಗ ಮಾಡುತಿದ್ದೇವೆ.ಭಾರತದ ಯೋಗದ ಲಾಭವನ್ನು ವಿದೇಶಿಗರು ಸಹ ಅರಿತು ದೇಹ ಮತ್ತು ಮನಸಿನ ಆರೋಗ್ಯಕ್ಕಾಗಿ ಇಂದು ಯೋಗವನ್ನು ಒಪ್ಪಿ ಅನುಸರಿಸುತ್ತಿದ್ದಾರೆ.


ಯೋಗವು ಮೂಲಭೂತವಾಗಿ ಅತ್ಯಂತ ಸೂಕ್ಷ್ಮವಾದ ವಿಜ್ಞಾನವನ್ನು ಆಧರಿಸಿದ ಆಧ್ಯಾತ್ಮಿಕ ಶಿಸ್ತು ಕ್ರಮವಾಗಿದೆ. ಇದು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಆರೋಗ್ಯಕರ ಜೀವನ ಕಲೆ ಮತ್ತು ವಿಜ್ಞಾನವಾಗಿದೆ.ಎಲ್ಲರೂ ಯೋಗವನ್ನು ದಿನನಿತ್ಯ ಮಾಡುತ್ತಾ ಸುಯೋಗಿಗಳಾಗಲಿ ಎಂದು ಕರೆ ನೀಡಿದರು.
ಸಚಿವರ ಜೊತೆ ಯೋಗಾಚರಣೆಯಲ್ಲಿ
ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ ಬಣಕಾರ್. ಪಟ್ಟಣ ಪಂಚಾಯತಿ ಅಧ್ಯಕ್ಷ ಕಂಠಾದ ಅಂಗಡಿ. ಅಶೋಕ್ ಪಾಟೀಲ್ ರವಿಶಂಕರ್ ಬಾಳಿಕಾಯಿ ಬಿಇಓ ಶ್ರೀಧರ ಎನ್. ತಾಲೂಕ ದೈಹಿಕ ಶಿಕ್ಷಣ ಅಧಿಕಾರಿ ಎಂಬಿ ಮಕಾಂದಾರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd