ಅಯೋಧ್ಯೆ ರಾಮಮಂದಿರದ ಗರ್ಭಗುಡಿ  ಶಂಕುಸ್ಥಾಪನೆ ನೆರವೇರಿಸಿದ CM ಯೋಗಿ ಆದಿತ್ಯನಾಥ್

1 min read

ಅಯೋಧ್ಯೆ ರಾಮಮಂದಿರದ ಗರ್ಭಗುಡಿ  ಶಂಕುಸ್ಥಾಪನೆ ನೆರವೇರಿಸಿದ CM ಯೋಗಿ ಆದಿತ್ಯನಾಥ್

ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರದ ಗರ್ಭಗುಡಿ ನಿರ್ಮಾಣ ಕಾರ್ಯಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇಂದು ಬೆಳಗ್ಗೆ 11 ಗಂಟೆ 15 ನಿಮಿಷದಲ್ಲಿ ಅಭಿಜಿತ್ ಮುಹೂರ್ತದಲ್ಲಿ ಪ್ರಥಮ ಶಿಲೆ ಇಡುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಯೋಗಿ ಆದಿತ್ಯನಾಥ್  ಶ್ರೀರಾಮಜನ್ಮಭೂಮಿ ಮಂದಿರದ ಕಾಮಗಾರಿ ಯಶಸ್ವಿಯಾಗಿ ನಡೆಯುತ್ತಿದ್ದು, ಇದು ವಿಶ್ವಾದ್ಯಂತ ನೆಲೆಸಿರುವ ಎಲ್ಲಾ ಸನಾತನ ಹಿಂದೂ ಧರ್ಮಾವಲಂಬಿಗಳಿಗೆ ಪರಮಪೂಜ್ಯ ಪವಿತ್ರ ತಾಣವಾಗುವುದಷ್ಟೇ ಅಲ್ಲ, ಭಾರತದ ರಾಷ್ಟ್ರೀಯ ಮಂದಿರವಾಗಲಿದೆ ಎಂದು ಪ್ರಕಟಿಸಿದರು.

ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಇಂದು ಗರ್ಭಗೃಹದ ಶಿಲಾಪೂಜೆ ಶಾಸ್ತ್ರೋಕ್ತವಾಗಿ ನೆರವೇರಿರುವುದು ರಾಮಭಕ್ತರಿಗೆ ಸಂತಸ ತಂದಿದೆ. ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾಧು-ಸಂತರು, ಈ ಶಿಲಾ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd