ಬೆಂಗಳೂರು : ದೇಶದ ಶೇ.27ರಷ್ಟು ವಿದ್ಯಾರ್ಥಿಗಳ ಬಳಿ ಆನ್ ಲೈನ್ ತರಗತಿಗಳಿಗೆ ಹಾಜರಾಗಲು ಅಗತ್ಯವಾದ ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಫೋನ್ ನ ಸೌಲಭ್ಯ ಇಲ್ಲ ಎಂದು ಎಸ್ ಸಿಇಆರ್ ಟಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಈ ವರದಿಯನ್ನು ಉಲ್ಲೇಖಿಸಿ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ವಿರುದ್ಧ ಗುಟುರು ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 27% ವಿದ್ಯಾರ್ಥಿಗಳ ಬಳಿ ಲ್ಯಾಪ್‍ಟಾಪ್ ಇಲ್ಲ. ಆನ್‍ಲೈನ್ ಶಿಕ್ಷಣ ಎಂದು ಕೊಚ್ಚಿಕೊಳ್ತಿರಿ ಎಂದು ಕಾಲೆಳೆದಿದ್ದಾರೆ. ಇದೇ ವೇಳೆ ತಮ್ಮ ಅವಧಿಯಲ್ಲಿ ಜಾರಿ ತರಲಾಗಿದ್ದ ಪದವಿ ವಿದ್ಯಾರ್ಥಿಗಳಿಗೆ ಫ್ರೀ ಲ್ಯಾಪ್ ಟಾಪ್ ಭಾಗ್ಯ ರದ್ದು ಮಾಡಿದ ಬಗ್ಗೆ ಪ್ರತಿಕ್ರಿಯಿಸಿ, “ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡುವ ಯೋಜನೆ ರದ್ದು ಮಾಡ್ತೀರಿ. ನಿಮಗೆ ಕೊಟ್ಟು ಗೊತ್ತಿಲ್ಲ, ಕಿತ್ತುಕೊಳ್ಳೊದಷ್ಟೇ ಗೊತ್ತು ಎಂದು ಸರ್ಕಾರಕ್ಕೆ ಗುದ್ದಿದ್ದಾರೆ.








