ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ವ್ಯಕ್ತಿಗಳ ಪಟ್ಟಿಯಲ್ಲಿ ಕ್ರಿಕೆಟ್ ದೇವರು..ರಾಕ್ಷಸ virat-kohli Saaksha tv
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಕ್ರಿಕೆಟ್ ರಾಕ್ಷಸ ವಿರಾಟ್ ಕೊಹ್ಲಿ 2021ರಲ್ಲಿವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಪುರುಷರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.
ಬ್ರಿಟಿಷ್ ಅಂತರಾಷ್ಟ್ರೀಯ ಇಂಟರ್ನೆಟ್ ಆಧಾರಿತ ಮಾರುಕಟ್ಟೆ ಸಂಶೋಧನೆ ಮತ್ತು ಡೇಟಾ ಅನಾಲಿಟಿಕ್ಸ್ ಸಂಸ್ಥೆ ಈ ವಿಶೇಷ ಪಟ್ಟಿಯನ್ನು ಹಂಚಿಕೊಂಡಿದೆ. ಸಮೀಕ್ಷೆಯ ಪ್ರಕಾರ ಕೊಹ್ಲಿ, ತೆಂಡೂಲ್ಕರ್, ರೊನಾಲ್ಡೊ ಮತ್ತು ಮೆಸ್ಸಿ 2021 ರಲ್ಲಿ ವಿಶ್ವದ ಟಾಪ್ 20 ಅತ್ಯಂತ ಮೆಚ್ಚುಗೆ ಪಡೆದ ಪುರುಷರಲ್ಲಿ ಸೇರಿದ್ದಾರೆ.
ಈ ವರ್ಷ ಅತ್ಯಂತ ಮೆಚ್ಚುಗೆ ಪಡೆದ ಪುರುಷರ ಶ್ರೇಯಾಂಕದಲ್ಲಿ ಟೆಸ್ಟ್ ನಾಯಕ ಕೊಹ್ಲಿಗಿಂತ ಸಚಿನ್ ಮೇಲಿದ್ದಾರೆ. ಪಟ್ಟಿಯಲ್ಲಿ ಕ್ರಿಕೆಟ್ ದೇವರು 12 ನೇ ಸ್ಥಾನದಲ್ಲಿದ್ದರೆ, ಕ್ರಿಕೆಟ್ ರಾಕ್ಷಸ ಕೊಹ್ಲಿ 18 ನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ಫುಟ್ಬಾಲ್ ಆಟಗಾರ ರೊನಾಲ್ಡೊ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಮೆಸ್ಸಿ ಟಾಪ್ 10 ಪಟ್ಟಿಯಲ್ಲಿ ರೊನಾಲ್ಡೊವನ್ನು ಮೀರಿಸಲು ವಿಫಲರಾಗಿದ್ದು, ಏಳನೇ ಸ್ಥಾನದಲ್ಲಿದ್ದಾರೆ.
38 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 42,000 ಕ್ಕಿಂತ ಹೆಚ್ಚು ಜನರನ್ನು ಸಮೀಕ್ಷೆಗೆ ಒಳಪಡಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಈ ಪಟ್ಟಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಮತ್ತು ಉದ್ಯಮಿ ಬಿಲ್ ಗೇಟ್ಸ್ ಇದ್ದಾರೆ.
ಇನ್ನುಳಿದಂತೆ ಭಾರತ ಪ್ರಧಾನಿ ನರೇಂದ್ರ ಮೋದಿ(8ನೇ ಸ್ಥಾನ), ಬಾಲಿವುಡ್ ಬಾದ್ಶಾ ಶಾರುಕ್ ಖಾನ್(14), ಬಿಗ್ ಬಿ ಅಮಿತಾಬ್(15) ಇದ್ದಾರೆ.