ಯುವತಿ ವಿಷಯ : ಯುವಕರ ಮಧ್ಯೆ ಗಲಾಟೆ ಕೊಲೆಯಲ್ಲಿ ಅಂತ್ಯ
ಕಲಬುರಗಿ : ಯುವತಿ ವಿಚಾರಕ್ಕೆ ಯುವಕರ ಮಧ್ಯೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಂಚೋಳಿ ತಾಲೂಕಿನ ಕುಪನೂರು ಗ್ರಾಮದಲ್ಲಿ ನಡೆದಿದೆ.
28 ವರ್ಷದ ಸಮೀತ್ ಕೊಲೆಯಾದ ಯುವಕನಾಗಿದ್ದಾನೆ. ಈತ ಯುವತಿಯನ್ನು ಚುಡಾಯಿಸಿದ್ದನಂತೆ.
ಈ ವಿಚಾರವಾಗಿ ಶನಿವಾರ ಸಂಜೆ ಯುವಕರ ಮಧ್ಯೆ ಗಲಾಟೆ ನಡೆದಿದೆ.

ಈ ವೇಳೆ ಅಲ್ಲಿನ ಯುವಕರು ಸಮೀರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಸುಲೆಪೇಟ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.








