ಲೇಡಿ ಪಿಎಸ್ ಐ ಜೊತೆ ಯುವಕ ಅನುಚಿತ ವರ್ತನೆ | ಠಾಣೆಗೆ ಎಳೆದೊಯ್ದ ಪೊಲೀಸರು
ರಾಯಚೂರು: ಲೇಡಿ ಪಿಎಸ್ ಐ ಜೊತೆ ಅನುಚಿತ ವರ್ತನೆ ತೋರಿದ್ದ ಯುವಕನನ್ನು ಲೇಡಿ ಪಿಎಸ್ ಐ ಎಲ್ಲರ ಎದುರಲ್ಲೇ ಥಳಿಸಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಕುರಕುಂದಾ ಗ್ರಾಮದಲ್ಲಿ ನಡೆದಿದೆ.
ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ನಟ ಸುದೀಪ್ ಬಂದಿದ್ದರು. ಈ ವೇಳೆ ಸಿರವಾರ ಠಾಣೆ ಪಿಎಸ್‍ಐ ಗೀತಾಂಜಲಿ ಸೇರಿದಂತೆ ಕೆಲ ಪೊಲೀಸರ ಜೊತೆ ಯುವಕ ಅನುಚಿತ ವರ್ತನೆ ತೋರಿದ್ದ. ಅಲ್ಲದೇ ಪೊಲೀಸರ ಲಾಠಿಯನ್ನು ಕಿತ್ತುಕೊಂಡು ಓಡಿಹೋಗಿದ್ದ.
ಓಡಿ ಹೋದ ಯುವಕನನ್ನು ಪೊಲೀಸರು ಚೇಸ್ ಮಾಡಿ ಹಿಡಿದು, ಎಲ್ಲರ ಎದುರಲ್ಲೆ ಥಳಿಸಿದ್ದಾರೆ. ಅಲ್ಲದೇ ಲೇಡಿ ಪಿಎಸ್ ಐ ಬೂಟು ಕಾಲಿನಿಂದ ಒದ್ದು ಠಾಣೆಗೆ ಎಳೆದೋಯ್ದಿದ್ದಾರೆ. ಸುದೀಪ್ ಆಗಮನ ವೇಳೆ ಅಭಿಮಾನಿಗಳ ನೂಕುನುಗ್ಗುಲು ಉಂಟಾಗಿದ್ದ ಹಿನ್ನೆಲೆ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿಪ್ರಹಾರ ನಡೆಸಿದರು.