ಅಮರ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಸದ್ಯ ಒಂದು ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಅಮರ್ ಚಿತ್ರದ ಹಾಡುಗಳು ಹಿಟ್ ಆದರೂ ಅಂದುಕೊಂಡಮಟ್ಟದಲ್ಲಿ ಸಿನಿಮಾ ಹಿಟ್ ಆಗಲಿಲ್ಲ. ಬಳಿಕ ಅಭಿ ಮುಂದಿನ ಸಿನಿಮಾಗಳ ಬಗ್ಗೆ ಮಾತುಗಳು ಕೇಳಿಬಂದರೂ ಯಾವುದೂ ಸೆಟ್ಟೇರಲಿಲ್ಲ. ಇದೀಗ ಗಾಂಧಿನಗರದ ಗಲ್ಲಿಯಲ್ಲಿ ಹೊಸ ಸುದ್ದಿವೊಂದು ಸದ್ದು ಮಾಡುತ್ತಿದೆ.
ಸುಕ್ಕಾ ಸೂರಿ ಜೊತೆ ‘ಯಂಗ್ ರೆಬೆಲ್ ಸ್ಟಾರ್’ ಸಿನಿಮಾ
ಹೌದು..! ಸುಕ್ಕಾ ಸೂರಿ ಸಿನಿಮಾದಲ್ಲಿ ಅಭಿಷೇಕ್ ನಟಿಸಲಿದ್ದಾರೆ ಎನ್ನುವ ಸುದ್ದಿವೊಂದು ಈಗ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡುತ್ತಿದೆ.ಮೂಲಗಳ ಪ್ರಕಾರ ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಷ್ ಸಿನಿಮಾ ಮಾಡುವ ಕುರಿತು ಮಾತುಕತೆಗಳು ನಡೆದಿವೆಯಂತೆ. ಹಾಗೆಯೇ ಕಥೆಯೊಂದರ ಕುರಿತು ಅಭಿಷೇಕ್ ಮನೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ.
ಇನ್ನು ಸೂರಿ ಜೊತೆ ಅಭಿಷೇಕ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಸಿನಿರಸಿಕರಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ.
ಒಟ್ಟಾರೆ ರೌಡಿಸಂ, ಆಕ್ಷನ್‌ನ ಕಚ್ಚಾ ಕಥೆಗಳನ್ನು ಹೇಳುವುದರಲ್ಲಿ ನಿಸ್ಸೀಮರಾದ ಸೂರಿ, ಅಭಿಷೇಕ್ ಜೊತೆ ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.








