ಹಾವೇರಿ: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ವಿಚಾರ ಭಾರಿ ಸದ್ದು ಮಾಡುತ್ತಿರುವಾಗಲೇ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೊಸ ಸವಾಲು ಹಾಕಿದ್ದಾರೆ.
`ಇಂದ್ರಜಿತ್ ಲಂಕೇಶ್ ಅವರೇ ಡ್ರಗ್ಸ್ ವಿಚಾರದಲ್ಲಿ ಹೀರೋ ಆಗೋಕೆ ಹೊರಟಿದ್ದೀರಲ್ಲಾ..ನಿಮ್ಮ ಅಕ್ಕ ಗೌರಿ ಲಂಕೇಶ್ ಡ್ರಗ್ ಅಡಿಕ್ಟ್ ಆಗಿದ್ದಾಗ ನೀವೆಲ್ಲಿಗೆ ಹೋಗಿದ್ರಿ. ಅಂದು ಯಾಕೆ ಈ ವಿಚಾರದ ಬಗ್ಗೆ ನೀವು ಮಾತನಾಡಲಿಲ್ಲ ? ಗೌರಿ ಲಂಕೇಶ್‍ರನ್ನು ಸುಧಾರಿಸುವ ಪ್ರಯತ್ನ ಏಕೆ ಮಾಡಲಿಲ್ಲ ? ಆದ್ರೆ ನಟರ ಮೇಲೆ ಆರೋಪ ಮಾಡ್ತಿರೋದು ಎಷ್ಟು ಸರಿ’ ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.
ಇಂತÀಹ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು. ಸರ್ಜಾ ಫ್ಯಾಮಿಲಿ ಉತ್ತಮ ಸಂಸ್ಕಾರದಿಂದ ಬಂದಿದೆ ಎಂದು ಇಂದ್ರಜಿತ್ ಲಂಕೇಶ್‍ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಡ್ರಗ್ ಮಾಫಿಯಾದಲ್ಲಿ ಪೊಲೀಸರು, ರಾಜಕಾರಣಿಗಳು: ಮುತಾಲಿಕ್
ಡ್ರಗ್ಸ್ ಮಾಫಿಯಾ ಬಗ್ಗೆ ಪೊಲೀಸ್ ಇಲಾಖೆಗೆ ಇಂಚಿಂಚೂ ಮಾಹಿತಿ ಇರುತ್ತದೆ. ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಇದ್ರಲ್ಲಿ ಇದ್ದಾನೆ. ನಮ್ಮ ಕೈಯಲ್ಲಿ ಹುಡುಕೋಕೆ ಆಗಿಲ್ಲ ಎಂದು ಪೊಲೀಸರು ಹೇಳಲಿ ನೋಡೋಣ. ನಾನು ಚಾಲೆಂಜ್ ಮಾಡುತ್ತೇನೆ. ಯಾರು ಯಾರು ಎಲ್ಲೆಲ್ಲಿ ಏನ್ ಮಾಡ್ತಾ ಇದಾರೆ ಅಂತ ಗೊತ್ತಿದೆ. ಸಾವಿರಾರು ಕೋಟಿ ವ್ಯವಹಾರ ಈ ದಂಧೆಯಲ್ಲಿ ನಡೀತಾ ಇದೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾ ಸಕ್ರಿಯವಾಗಿದೆ. 2009ರಲ್ಲೇ ಸರ್ಕಾರದ ಗಮನಕ್ಕೆ ತಂದಿದ್ದೆ. ಅಂದು ಇಡೀ ದೇಶದಲ್ಲಿ ನನ್ನು ಟಾರ್ಗೆಟ್ ಮಾಡಿದರು. ರಾಜ್ಯದಲ್ಲಿ ಡ್ರಗ್ ಮಾಫಿಯಾ ಸಕ್ರಿಯವಾಗಿದೆ ಎಂದು ಹೇಳಿದ್ದಾರೆ.








