ಅಂತರಾಷ್ಟ್ರೀಯ ಮಟ್ಟದಲ್ಲಿ ದೆಹಲಿ ರೈತ ಪ್ರತಿಭಟನೆಯದ್ದೆ ಸದ್ದು : ಗ್ರಾಮಿ ವೇದಿಕೆಯಲ್ಲಿ ‘ಐ ಸ್ಟ್ಯಾಂಡ್ ವಿತ್ ಫಾರ್ಮರ್ಸ್’ ಸದ್ದು..!
ನವದೆಹಲಿ: ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ಕಳೆದ 3-4 ತಿಂಗಳುಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಉಗ್ರ ಹೋರಾಟ ನಡೆಸುತ್ತಿದ್ದಾರೆ. ಇವರ ಪ್ರತಿಭಟನೆಗೆ ವಿರೋಧ ಪಕ್ಷಗಳು, ಪ್ರಮುಖ ರಾಜಕೀಯ ಮುಖಂಡರು ಸಾಥ್ ನೀಡಿದ್ದಾರೆ. ಸಾಲದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೈತ ಪ್ರತಿಭಟನೆ ಸದ್ದು ಮಾಡ್ತಿದೆ. ಪೋರ್ನ್ ತಾರೆ ಮಿಯಾ ಖಲೀಫಾ, ಖ್ಯಾತ ಪಾಪ್ ಗಾಯಕಿ ರಿಹಾನ್ನಾ, ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಜ್ ರೈತರ ಪರ ಸಪೋರ್ಟ್ ಮಾಡಿದ್ದರು. ಟ್ವಿಟ್ಟರ್ ನಲ್ಲಿ ರೈತ ಹೋರಾಟ ಟ್ರೆಮಡ್ ಆಗಿದ್ದು, ಟೂಲ್ ಕಿಟ್ ವಿವಾದಕ್ಕೆ ಬೆಂಗಳೂರಿನ ಯುವತಿ ದಿಶಾ ಅರೆಸ್ಟ್ ಆಗಿದ್ದಾರೆ.
BIGG BOSS 8 : 2ನೇ ವಾರ ನಿರ್ಮಲಾಗೆ ದೊಡ್ಮನೆಯಿಂದ ಗೇಟ್ ಪಾಸ್..!
ಇದೀಗ ಮತ್ತೆ ಈ ವಿಚಾರ ಜಾಗತಿಕ ಮಟ್ಟದಲ್ಲಿ ರಂಗು ಪಡೆದುಕೊಂಡಿದೆ. ಗ್ರಾಮಿ ರೆಡ್ ಕಾರ್ಪೆಟ್ ವೇದಿಕೆಯಲ್ಲಿ ರೈತ ಹೋರಾಟದ ಪರ ಧ್ವನಿ ಎತ್ತಲಾಗಿದೆ. ಖ್ಯಾತ ಯೂಟ್ಯೂಬರ್ ಲಿಲ್ಲಿ ಸಿಂಗ್ ಗ್ರಾಮಿ ರೆಡ್ ಕಾರ್ಪೆಟ್ ವೇದಿಕೆಯಲ್ಲಿ ‘ಐ ಸ್ಟ್ಯಾಂಡ್ ವಿತ್ ಫಾರ್ಮರ್ಸ್’ ಬರಹವಿರುವ ಮಾಸ್ಕ್ ಧರಿಸಿ ಫೋಟೋಗೆ ಪೋಸ್ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಭಾರತದಲ್ಲಿನ ಕೆಲವರು ನಮ್ಮ ದೇಶದ ಆಂತರಿಕ ವಿಚಾರದಲ್ಲಿ ತಲೆ ಹಾಕಿ ಭಾರತವನ್ನ ಅವಮಾನ ಮಾಡುವ ಸಂಚು ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ ಎಂಬ ಅಭಿಪ್ರಯಾವನ್ನೂ ಹೊರಹಾಕಿದ್ದಾರೆ.
ಇಂದು ಮತ್ತು ನಾಳೆ ಬ್ಯಾಂಕ್ ಬಂದ್ : ಸಾರ್ವಜನಿಕರಿಗೆ ತಲೆ ಬಿಸಿ
ಇನ್ನೂ ರೆಡ್ ಕಾರ್ಪೆಟ್ ನಲ್ಲಿನ ಈ ಫೋಟೋವನ್ನು ಲಿಲ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಂತೆಯೇ ಈ ಕುರಿತು ಟ್ವೀಟ್ ಮಾಡಿರುವ ಆಕೆ.. ನನಗೆ ಗೊತ್ತಿತ್ತು.. ಗ್ರಾಮಿ ರೆಡ್ ಕಾರ್ಪೆಟ್ ವೇದಿಕೆ ಹೆಚ್ಚು ಮಾಧ್ಯಮ ಪ್ರಚಾರ ಪಡೆಯುತ್ತದೆ. ಯಾವುದೇ ವಿಚಾರ ಹಂಚಿಕೊಳ್ಳಲು ಇದು ಉತ್ತಮ ವೇದಿಕೆ ಎಂದೆನಿಸಿತು. ಅಂತೆಯೇ ನಿಮ್ಮ ಭಾವನೆ ಹಂಚಿಕೊಳ್ಳಲು ನೀವೂ ಕೂಡ ಸ್ವತಂತ್ರ್ಯ ಎಂದು ಹೇಳಿದ್ದಾರೆ.
ಕೊರೊನಾ ಹೆಚ್ಚಳ : ಮತ್ತೆ ಲಾಕ್ ಡೌನ್ ಜಾರಿ