ಕಡೂರು : ನಾಳೆ ನನ್ನ ಹುಟ್ಟು ಹಬ್ಬವಿರುವ ಕಾರಣ ಶುಭಾಶಯಗಳನ್ನು ತಿಳಿಸಲು ನಮ್ಮ ಮನೆಗೆ ಬರಬೇಡಿ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್. ವಿ ದತ್ತ ಮನವಿ ಮಾಡಿಕೊಂಡಿದ್ದಾರೆ.
ಈ ವಿಚಾರವಾಗಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದರುವ ವೈ.ಎಸ್. ವಿ ದತ್ತ, ನಾಳೆ ( june 24 ) ನಾನು ಹುಟ್ಟಿದ ದಿನ. ನನಗೀಗ 67 ವರ್ಷ. ಹೀಗೆ ನನ್ನ ಹುಟ್ಟಿದ ದಿನವನ್ನು ಹೇಳಿಕೊಂಡಾಗಲಿ ಅಥವಾ ಹುಟ್ಟುಹಬ್ಬವನ್ನು ವೈಯಕ್ತಿಕವಾಗಿ ಸಾರ್ವಜನಿಕವಾಗಿ ಆಚರಿಸಿಕೊಂಡಗಲಿ ನನಗೆ ಅಭ್ಯಾಸವಿಲ್ಲ. ಆದರೆ ಫೇಸ್ ಬುಕ್ ಟ್ವಿಟ್ಟರ್ ನ ಮೂಲಕ ನನ್ನ ಹಿತೈಷಿಗಳಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಒಂದು ವಿನಂತಿ ಮಾಡಿಕೊಳ್ಳಬೇಕಿದೆ.
ಪ್ರತಿ ವರ್ಷ ಸಾಮಾನ್ಯವಾಗಿ ನನ್ನ ಹಿತೈಷಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು ಮನೆಗೆ ಬಂದು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದರು. ಆದ್ರೆ ಈ ವರ್ಷ ಇಡೀ ವಿಶ್ವವೇ ಕೊರೊನಾ ಎಂಬ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದೆ. ಈ ಸಂದರ್ಭದಲ್ಲಿ ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿದೆ . ನೀವುಗಳು ಕೊರೊನಾದ ಈ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಆಚೆ ಓಡಾಡದೇ, ನಾಳೆ ನನ್ನ ಮನೆಗೆ ಬರದೆ, ನೀವು ಇದ್ದಲ್ಲಿಂದಲೇ ಶುಭಾಶಯ ಕೋರುವುದು ಸರ್ವತಾ ಕ್ಷೇಮ. ನಾನಂತೂ ನಿಮ್ಮ ಅಭಿಮಾನಕ್ಕೆ ಸದಾ ಚಿರಋುಣಿ ಎಂದು ಹೇಳಿದ್ದಾರೆ.








