ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಬರೆದ ಯುವರತ್ನ ಟ್ರೇಲರ್..!
ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಟ್ರೇಲರ್ ಗೆ ಯೂಟ್ಯೂಬ್ ನಲ್ಲಿ ಸಖತ್ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.
ಟ್ರೇಲರ್ ನಲ್ಲಿ ಅಪ್ಪು ಲುಕ್, ಡೈಲಾಗ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಈ ಟ್ರೇಲರ್ ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಬರೆದಿದೆ. ಯುವರತ್ನ ಟ್ರೇಲರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ 70 ಲಕ್ಷ ವೀವ್ಸ್ ಪಡೆದಿದೆ.
ಏಪ್ರಿಲ್ 1ಕ್ಕೆ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ. ಈಗಾಗಲೇ ಟೀಸರ್ ಮತ್ತು ಹಾಡುಗಳಿಂದ ಗಮನ ಸೆಳೆದಿರುವ ಯುವರತ್ನ ಚಿತ್ರದ ಟ್ರೇಲರ್ ಅದ್ಧೂರಿಯಾಗಿ ಲಾಂಚ್ ಆಗಿದೆ. ತೆಲುಗಿನಲ್ಲಿ ಟ್ರೇಲರ್ ಅಬ್ಬರಿಸುತ್ತಿದ್ದು, ಪವರ್ ಸ್ಟಾರ್ ಗೆ ಪರ ಬಾಷಾ ಫ್ಯಾನ್ಸ್ ಗಳು ಉಘೇ ಎನ್ನುತ್ತಿದ್ಧಾರೆ.
ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನ ಅಡಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಕಿರಗಂದೂರು ಅವರು ಬಂಡವಾಳ ಹೂಡಿದ್ದಾರೆ.
ನನ್ನನ್ನ ನಿಮ್ಮ ಮಗಳೆಂದುಕೊಂಡು ಪಾಸ್ ಮಾಡಿ ಪ್ಲೀಸ್.. ಪರೀಕ್ಷಾ ಪೇಪರ್ ನಲ್ಲಿ ವಿದ್ಯಾರ್ಥಿನಿ ಮನವಿ..!
74 ವರ್ಷದ ವೃದ್ಧನ ಹತ್ಯೆ ಪ್ರಕರಣ : ಮೂವರು ಬಿಜೆಪಿ ಕಾರ್ಯಕರ್ತರ ಬಂಧನ..!
ಮಾಸ್ಕ್ ಧರಿಸುವಂತೆ ಹೇಳಿದ್ದೇ ತಪ್ಪಾ… ಮಾರ್ಷಲ್ ಜುಟ್ಟು ಹಿಡಿದು ಹೊಡೆದ ಮಹಿಳೆ..! VIDEO VIRAL







