`ಯುವರಾಜ’ನ ಸಿಂಹ ಘರ್ಜನೆಗೆ 14 ವರ್ಷ

1 min read

`ಯುವರಾಜ’ನ ಸಿಂಹ ಘರ್ಜನೆಗೆ 14 ವರ್ಷ

ಇಂದಿಗೆ ಸರಿಯಾಗಿ 14 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಪಂಜಾಬ್ ಕಾ ಶೇರ್ ಯುವರಾಜ್ ಸಿಂಗ್ ಇಡೀ ಕ್ರಿಕೆಟ್ ಜಗತ್ತನ್ನು ಬೆಚ್ಚಿ ಬೀಳಿಸಿದ್ದರು.

ಡರ್ಬನ್‍ನಲ್ಲಿ ನಡೆದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‍ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ‘ಸಿಕ್ಸರ್ ಕಿಂಗ್’ ಯುವರಾಜ್ ಸಿಂಗ್ ಓವರ್ ನ ಎಲ್ಲ ಆರು ಎಸೆತಗಳನ್ನು ಸಿಕ್ಸರ್‍ಗಟ್ಟುವ ಮೂಲಕ ದಾಖಲೆ ಬರೆದಿದ್ದರು.

ಅಂದು ಕ್ರೀಸ್ ಗೆ ಬಂದ ಯುವರಾಜ್ ಸಿಂಗ್ ಮೊದಲು ಸಮಾಧಾನವಾಗಿ ಬ್ಯಾಟ್ ಬೀಸುತ್ತಿದ್ದರು. ಪಂದ್ಯ ಕೊನೆಯಗಟ್ಟದಲ್ಲಿ ಆಂಡ್ರ್ಯೂ ಫ್ಲಿಂಟಾಫ್ ಯುವರಾಜ್ ಸಿಂಗ್ ಅವರನ್ನ ಕೆಣಕಿದರು.

ಇದರಿಂದ ತೀವ್ರ ಕುಪಿತಗೊಂಡಿದ್ದ ಯುವಿ ಸ್ಟೂವರ್ಟ್ ಬ್ರಾರ್ಡ್ ಓವರ್ ನ ಎಲ್ಲಾ ಎಸೆತಗಳನ್ನು ಸಿಕ್ಸರ್ ಬಾರಿಸಿದರು. ಅಷ್ಟೇ ಕೇವಲ 12 ಎಸೆತಗಳಲ್ಲೇ ಅರ್ಧಶತಕ ಬಾರಿಸುವ ಮೂಲಕ ವಿಶ್ವ ದಾಖಲೆ ಬರೆದರು.

Yuvraj Singh saaksha tv

ಅಂದು ಡರ್ಬನ್ ನಲ್ಲಿ ನಡೆದಿದ್ದು, ನಿಜಕ್ಕೂ ಆಂಗ್ಲರ ಮಾರಣಹೋಮ. ಯಾಕಂದರೇ ಅಂದು ಯುವಿ ಕ್ರೀಸ್ ನಲ್ಲಿ ಹಸಿದ ಹೆಬ್ಬುಲಿಯಂತೆ ಕಾಣುತ್ತಿದ್ದರು.

ದಡಂ ದಶಗುಣಂ ಎಂಬಂತೆ ಬ್ಯಾಟ್ ಬೀಸಿದ ಯುವಿ, ಇಂಗ್ಲೀಷರು ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ್ದರು. ಆ ಐತಿಹಾಸಿಕ ದಿನಕ್ಕೆ ಇಂದಿಗೆ 14 ವರ್ಷ.

ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಂದಿನ ಪಂದ್ಯದ ವಿಡಿಯೋ ಫೋಟೋಸ್ ಶೇರ್ ಮಾಡಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd