ADVERTISEMENT
Tuesday, March 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪಂಜಾಬ್ ಯುವ ಕ್ರಿಕೆಟಿಗರಿಗೆ ಮೆಂಟರ್ ಆಗಿರುವ ಯುವರಾಜ್ ಸಿಂಗ್  ಹೇಳಿದ್ದೇನು ?

admin by admin
July 31, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಪಂಜಾಬ್ ಯುವ ಕ್ರಿಕೆಟಿಗರಿಗೆ ಮೆಂಟರ್ ಆಗಿರುವ ಯುವರಾಜ್ ಸಿಂಗ್  ಹೇಳಿದ್ದೇನು ?

ಯುವರಾಜ್ ಸಿಂಗ್ ಇಷ್ಟು ದಿನ ಸಾಮಾಜಿಕ ಜಾಲ ತಾಣದಲ್ಲಿ ಬಿಝಿಯಾಗಿದ್ದರು. ಕೋವಿಡ್-19 ಮತ್ತು ಲಾಕ್ ಡೌನ್ ಟೈಮ್ ನಲ್ಲಿ ಸಹ ಆಟಗಾರರ ಜೊತೆ ಚಾಟಿಂಗ್ ಮಾಡುತ್ತಾ ಕಾಲ ಕಳೆಯುತ್ತಿದ್ದರು. ಈ ನಡುವೆ ಕೆಲವೊಂದು ವಿಚಾರಗಳಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಟೀಕೆಗೂ ಗುರಿಯಾಗಿದ್ರು. ಇದೀಗ ಯುವರಾಜ್ ಸಿಂಗ್ ಮೈದಾನಕ್ಕೆ ಇಳಿದಿದ್ದಾರೆ.
ಚಂಡಿಗಢದಲ್ಲಿ ಪಂಜಾಬ್ ತಂಡದ ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಲು ಮುಂದಾಗಿದ್ದಾರೆ. ಯುವ ಪ್ರತಿಭೆಗಳಾದ ಶುಭ್ಮನ್ ಗಿಲ್, ಅನ್ಮೊಲ್ ಪ್ರೀತ್ ಮತ್ತು ಅಭಿಷೇಕ್ ಶರ್ಮಾ ಅವರ ಜೊತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಪುನೀತ್ ಬಾಲಿ ಅವರ ಮನವಿಯಂತೆ ಪಂಜಾಬ್ ತಂಡದ 21 ದಿನಗಳ ತರಬೇತಿ ಶಿಬಿರಕ್ಕೆ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಾನು ಈ ಜವಾಬ್ದಾರಿಯನ್ನು ಆನಂದಿಸುತ್ತಿದ್ದೇನೆ. ನಾನು ಕ್ರಿಕೆಟ್ ಆಡುತ್ತಿರುವಾಗ ನನಗೂ ಅದ್ಭುತವಾದ ಮೆಂಟರ್‍ಗಳಿದ್ದರು. ಆಟಗಾರರಿಗೆ ಅತ್ಯಾಧುನಿಕ ಮಟ್ಟದ ಸೌಲಭ್ಯಗಳನ್ನು ನೀಡಿರುವ ಬಗ್ಗೆ ಯುವರಾಜ್ ಸಿಂಗ್ ಖುಷಿಪಟ್ಟಿದ್ದಾರೆ. ಯುವಿ ಕೆಲವು ದಿನಗಳ ಹಿಂದೆ ಮೊಹಾಲಿ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದರು.
ಕ್ರಿಕೆಟ್ ಮತ್ತು ಸ್ಕೇಟಿಂಗ್ ಕ್ರೀಡೆಗಳನ್ನು ನಾನು ತುಂಬಾ ಇಷ್ಟಪಡುತ್ತೇನೆ. ಇದೀಗ ನನ್ನ ಬಳಿ ಸಾಕಷ್ಟು ಸಮಯವಿದೆ. ಈ ನಡುವೆ ಗಾಲ್ಫ್ ಕೂಡ ಆಡುತ್ತಿದ್ದೇನೆ. ಗಾಲ್ಫ್ ಅಂಗಣದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಯುವರಾಜ್ ಸಿಂಗ್ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಆ ನಂತರ ಅವರು ಗ್ಲೋಬಲ್ ಟಿ-ಟ್ವೆಂಟಿ ಕೆನಡಾ ಟೂರ್ನಿ, ಯುಎಇನಲ್ಲಿ ಟಿ-ಟೆನ್ ಲೀಗ್‍ನಲ್ಲಿ ಆಡಿದ್ದರು. ಆದ್ರೆ ಈ ವರ್ಷ ಏನು ಪ್ಲಾನ್ ಮಾಡಿಕೊಂಡಿಲ್ಲ. ಅಂತಾರಾಷ್ಟ್ರೀಯ ಲೀಗ್ ಟೂರ್ನಿಯನ್ನು ಆಡಲು ಇಚ್ಚಿಸುತ್ತಿದ್ದೇನೆ. ಕೋವಿಡ್-19ನಿಂದ ಈ ಲೀಗ್ ಗಳು ಯಾವಾಗ ಶುರುವಾಗುತ್ತದೆ ಎಂಬುದು ಗೊತ್ತಿಲ್ಲ ಎಂದು ಯುವಿ ತಿಳಿಸಿದ್ದಾರೆ.
ಇನ್ನು ಯುವ ಬ್ಯಾಟ್ಸ್ ಮೆನ್ ಶುಬ್ಮಾನ್ ಗಿಲ್ ಅವರ ಪ್ರತಿಭೆಯನ್ನು ಕೊಂಡಾಡಿದ ಯುವಿ, 20ರ ಹರೆಯದ ಗಿಲ್ ಗೆ ಉಜ್ಜಲವಾದ ಭವಿಷ್ಯವಿದೆ. ಆತ ಭಾರತ ತಂಡದಲ್ಲಿ ಸುದೀರ್ಘವಾಗಿ ಆಡುವ ಅವಕಾಶವಿದೆ. ಈ ನಡುವೆ ಮೈದಾನದಲ್ಲಿ ಗಿಲ್ ಅವರ ವರ್ತನೆಯ ಬಗ್ಗೆ ಟೀಕೆಗಳಿವೆ. ಆದ್ರೂ ಯುವರಾಜ್ ಸಿಂಗ್ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಗಿಲ್ ದೆಹಲಿ ವಿರುದ್ಧದ ರಣಜಿ ಪಂದ್ಯದ ವೇಳೆ ಅಂಪೈರ್ ಜೊತೆ ಮಾತಿನ ಸಮರ ನಡೆಸಿದ್ದರು ಎಂಬ ಆರೋಪವಿತ್ತು.

Related posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

March 17, 2026
ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

March 17, 2026

ಆ ಘಟನೆ ನಡೆದಾಗ ನಾನೂ ಮೈದಾನದಲ್ಲಿದ್ದೆ. ಗಿಲ್ ಯಾರನ್ನೂ ಕೂಡ ನಿಂದನೆ ಮಾಡಿಲ್ಲ. ಅಂಪೈರ್ ಅವರನ್ನು ಪ್ರಶ್ನೆ ಮಾಡಿದ್ದಾನೆ. ಕೆಲವೊಂದು ಬಾರಿ ಬ್ಯಾಟ್ಸ್ ಮೆನ್‍ಗಳು ಈ ರೀತಿ ಮಾಡುತ್ತಾರೆ. ಅವನು ಇನ್ನೂ ಚಿಕ್ಕವ. ರನ್ ಗಳಿಸುವ ಹಸಿವು ಇದೆ. ನಾನು ಕೂಡ ಕೆಲವೊಂದು ಬಾರಿ ಇದೇ ರೀತಿ ವರ್ತಿಸಿದ್ದೇನೆ. ಆತ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾನೆ. ಗಿಲ್ ವಿಶೇಷ ಪ್ರತಿಭೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಪಂಜಾಬ್ ನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಂತಹ ಸೌಲಭ್ಯಗಳನ್ನು ನೀಡಲು ಪಂಜಾಬ್ ಕ್ರಿಕೆಟ್ ಸಂಸ್ಥೆಯು ಯೋಜನೆ ರೂಪಿಸುತ್ತಿದೆ. ಅತ್ಯಾಧುನಿಕ ಮಟ್ಟದ ಸೌಲಭ್ಯಗಳನ್ನು ನೀಡಿದಾಗ ತಂಡದ ಗುಣಮಟ್ಟ ಕೂಡ ಸುಧಾರಣೆಯಾಗುತ್ತದೆ. ಹೀಗಾಗಿ ಮುಂದಿನ ಎರಡು ಮೂರು ವರ್ಷಗಳಲ್ಲಿ ಪಂಜಾಬ್ ತಂಡ ರಣಜಿ ಟ್ರೋಫಿ ಗೆಲ್ಲಬಹುದು ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

Tags: Abhishek SharmaAnmolpreet SinghbcciChandigarhCricketgolfmohalipcaPunjabpunjab cricketPunjab Cricket AssociationPunjab cricketerspunjab ranaji teamShubman Gillsketingteam indiayuvraj singh
ShareTweetSendShare
Join us on:

Related Posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

by admin
March 17, 2026
0

ನಮಸ್ಕಾರ ಸ್ನೇಹಿತರೆ ಕನಕಧಾರ ಸ್ತೋತ್ರವನ್ನು ಮನೆಯಲ್ಲಿ ಪಠನೆ ಮಾಡುವುದರಿಂದ ಯಾವ ರೀತಿಯ ಫಲಗಳು ದೊರೆಯುತ್ತವೆ ಹಾಗೆಯೇ ಕನಕಧಾರಾ ಸ್ತೋತ್ರವನ್ನು ಪಠಿಸುವಾಗ ಯಾವ ನಿಯಮಗಳನ್ನು ಮುಖ್ಯವಾಗಿ ಅನುಸರಿಸಬೇಕು ಎಂಬುವುದರ...

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

by Shwetha
March 17, 2026
0

ಮಾರ್ಚ್ 17 ಕರುನಾಡಿಗೆ ಕೇವಲ ಒಂದು ದಿನಾಂಕವಲ್ಲ, ಅದೊಂದು ಹಬ್ಬ. ಕನ್ನಡ ಚಿತ್ರರಂಗದ ಹೆಮ್ಮೆಯ ಪುತ್ರ, ಕರುನಾಡಿನ ಅಚ್ಚುಮೆಚ್ಚಿನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ...

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

by Shwetha
March 17, 2026
0

ರಾಜಧಾನಿ ಬೆಂಗಳೂರಿನಲ್ಲಿ ಸ್ವಂತದ್ದೊಂದು ಸಣ್ಣ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕಬೇಕು ಎಂದು ಕನಸು ಕಾಣುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ರಾಜ್ಯ ಸರ್ಕಾರವು ಬಹುದೊಡ್ಡ ರಿಲೀಫ್...

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

by Shwetha
March 17, 2026
0

ಇರಾನ್, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಯುದ್ಧದ ಪರಿಣಾಮ ಕರ್ನಾಟಕದ ಆರ್ಥಿಕತೆಯ ಮೇಲೂ ಪ್ರಭಾವ ಬೀರಲು ಆರಂಭಿಸಿದೆ. ಯುದ್ಧದ ಪರಿಣಾಮವಾಗಿ ದೇಶಾದ್ಯಂತ...

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

by Shwetha
March 17, 2026
0

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನಮ್ಮ ಮೆಟ್ರೋ ವಿಸ್ತರಣೆಯ ಭಾಗವಾಗಿ ಪಿಂಕ್ ಲೈನ್‌ನಲ್ಲಿ ಸೇವೆ ಆರಂಭಿಸಲು ಸಿದ್ಧತೆಗಳನ್ನು ವೇಗಗೊಳಿಸಿದೆ. ಮೇ ತಿಂಗಳಲ್ಲಿ ಪಿಂಕ್ ಲೈನ್ ಮೆಟ್ರೋ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram