Yuxvendra Chahal | ಟಿ 20 ಕ್ರಿಕೆಟ್ ನಲ್ಲಿ ಚಹಾಲ್ ಅಪರೂಪದ ಸಾಧನೆ..!!
ರಾಜಸ್ಥಾನ ರಾಯಲ್ಸ್ ತಂಡದ ಬೌಲರ್ ಯಜ್ವೇಂದ್ರ ಚಹಾಲ್ ಟಿ20 ಕ್ರಿಕೆಟ್ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.
ಐಪಿಎಲ್ 2022 ರ ಭಾಗವಾಗಿ ರಾಜಸ್ಥಾನ್ ರಾಯಲ್ಸ್ ತನ್ನ ಮೊದಲ ಪಂದ್ಯವನ್ನು SRH ವಿರುದ್ಧ ಆಡಿತು.
ಈ ಪಂದ್ಯದಲ್ಲಿ ಚಹಾಲ್ 4 ಓವರ್ ಗಳಲ್ಲಿ 22 ರನ್ ನೀಡಿ ಮೂರು ನಿರ್ಣಾಯಕ ವಿಕೆಟ್ ಪಡೆದರು.
ಈ ಹಿನ್ನೆಲೆಯಲ್ಲಿ ಚಹಾಲ್ ಟಿ20 ಕ್ರಿಕೆಟ್ನಲ್ಲಿ (ಅಂತರರಾಷ್ಟ್ರೀಯ, ಲೀಗ್ಗಳಲ್ಲಿ) 250 ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದರು.
SRH ಬ್ಯಾಟರ್ ಶೆಫರ್ಡ್ ಅವರನ್ನು ಔಟ್ ಮಾಡುವ ಮೂಲಕ ಚಹಾಲ್ ಈ ಸಾಧನೆ ಮಾಡಿದರು.
ಅವರು ಟೀಮ್ ಇಂಡಿಯಾದಿಂದ ಟಿ20ಯಲ್ಲಿ 250 ವಿಕೆಟ್ ಗಳಿಸಿದ ನಾಲ್ಕನೇ ಬೌಲರ್ ಎನಿಸಿಕೊಂಡರು.
ಇದಕ್ಕೂ ಮುನ್ನ ಪಿಯೂಷ್ ಚಾವ್ಲಾ (262 ವಿಕೆಟ್), ಅಮಿತ್ ಮಿಶ್ರಾ (260 ವಿಕೆಟ್) ಮತ್ತು ರವಿಚಂದ್ರನ್ ಅಶ್ವಿನ್ (264 ವಿಕೆಟ್) 250 ವಿಕೆಟ್ ಗಡಿದಾಟಿದ್ದರು.
ಇನ್ನು ಪಂದ್ಯದ ವಿಚಾರಕ್ಕೆ ಬಂದ್ರೆ SRH ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲುವು ಸಾಧಿಸಿದೆ.
211 ರನ್ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಎಸ್ಆರ್ಎಚ್ 20 ಓವರ್ಗಳಲ್ಲಿ 7 ವಿಕೆಟ್ಗೆ 149 ರನ್ ಗಳಿಸಲಷ್ಟೇ ಶಕ್ತವಾಯಿತು.
ರಾಜಸ್ಥಾನ್ ರಾಯಲ್ಸ್ ಬೌಲರ್ ಗಳಾದ ಚಹಾಲ್ 3, ಬೌಲ್ಟ್, ಪ್ರಸಿದ್ಧ ಕೃಷ್ಣ ತಲಾ ಎರಡು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. yuzvendra-chahal-bags-250th-wicket-t20