IPL 2022 | 17ನೇ ಓವರ್ 2 ರನ್ ಹ್ಯಾಟ್ರಿಕ್ ಸಹಿತ 4 ವಿಕೆಟ್.. ವ್ಹಾ ಚಹಲ್..!
ಸ್ಪಿನ್ ಚಾಣಾಕ್ಷʼ ಚಹಲ್ ಹ್ಯಾಟ್ರಿಕ್.. ಬಟ್ಲರ್ ಸೆಂಚುರಿ.. ರಾಜಸ್ಥಾನ್‌ಗೆ 7 ರನ್‌ಗಳ ರೋಚಕ ಜಯ
ಹೌದು…!! ಬ್ರೆಬೋರ್ನ್ ಮೈದಾನದಲ್ಲಿ ನಡೆದ ಪಂದ್ಯ ಕಂಪ್ಲೀಟ್ ರಾಯಲ್ಸ್ ಮಯವಾಗಿತ್ತು. ಬ್ಯಾಟಿಂಗ್ ನಲ್ಲಿ ಜೋಸ್ ಬಟ್ಲರ್ ಅಬ್ಬರಿಸಿದ್ರೆ, ಬೌಲಿಂಗ್ ನಲ್ಲಿ ಯುಜುವೇಂದ್ರ ಚಹಲ್ ಕಮಾಲ್ ಮಾಡಿದರು.
ಪರಿಣಾಪ ಸಂಜು ಸ್ಯಾಮ್ ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ 7 ರನ್ ಗಳ ಅಂತರ ರಣ ರೋಚಕ ಜಯ ಸಾಧಿಸಿತ್ತು.
ಆ ಮೂಲಕ 15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ,ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಬ್ರೆಬೋರ್ನ್ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ ಆಸರೆಯಾದ್ರು.
ಬಟ್ಲರ್ ಟೂರ್ನಿಯಲ್ಲಿ ಎರಡನೇ ಶತಕ ಸಿಡಿಸಿದ ಪರಿಣಾಮ, ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು.
15ನೇ ಆವೃತ್ತಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಜಾಸ್ ಬಟ್ಲರ್ 61 ಎಸೆತಗಳಲ್ಲಿ 103 ರನ್ ಗಳಿಸಿದರು.
ಉಳಿದಂತೆ ದೇವದತ್ ಪಡಿಕ್ಕಲ್ 24ರನ್, ನಾಯಕ ಸಂಜೂ ಸ್ಯಾಮ್ಸನ್ 38 ರನ್ ಹಾಗೂ ಶಿಮ್ರಾನ್ ಹೆಟ್ಮಾಯೆರ್ 26 ರನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.
ರಿಯಾನ್ ಪರಾಗ್ 5 ರನ್ ಹಾಗೂ ಕರುಣ್ ನಾಯರ್ ಮೂರು ರನ್ ಗಳಿಸಿದರು.
ಈ ಟಾರ್ಗೆಟ್ ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ 19.4ನೇ ಓವರ್‌ನಲ್ಲಿ 210 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 7 ರನ್‌ಗಳ ಸೋಲೊಪ್ಪಿಕೊಂಡಿತು.
ಆರಂಭದಲ್ಲಿ ಸುನೀಲ್ ನರೈನ್ ಶೂನ್ಯಕ್ಕೆ ಔಟ್ ಆದ್ರು, ಆದರೆ ನಂತರ ಜೊತೆಯಾದ ಆರನ್ ಫಿಂಚ್, ಶ್ರೇಯಸ್ ಅಯ್ಯರ್ ಉತ್ತಮ ಜೊತೆಯಾಟವಾಡಿದರು.
ಪಿಂಚ್ 28 ಎಸೆತಗಳಲ್ಲಿ 58 ರನ್ ಗಳಿಸಿದ್ರೆ, 51 ಎಸೆತದಲ್ಲಿ ಶ್ರೇಯಸ್ ಅಯ್ಯರ್ 85 ರನ್ ಗಳಿಸಿದರು.
ಆದರೆ ನಂತರ ಬಂದ ನಿತೀಶ್ ರಾಣ 18 ರನ್ ಗಳಿಸಿದ್ರು. ಕೊನೆಯಲ್ಲಿ ಉಮೇಶ್ ಅಬ್ಬರಿಸಿದ್ರೂ ಪಂದ್ಯ ಗೆಲ್ಲಿಸಿಕೊಡಲಾಗಲಿಲ್ಲ.
ಅಂದಹಾಗೆ ಕಠಿಣ ಸವಾಲು ಬೆನ್ನತ್ತಿದ ಕೆಕೆಆರ್, 16ನೇ ಓವರ್‌ವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.
ಆದರೆ 17ನೇ ಓವರ್ ಬೌಲಿಂಗ್ ದಾಳಿಗಿಳಿದ ಯುಜು಼ವೇಂದ್ರ ಚಹಲ್ ಪಂದ್ಯದ ದಿಕ್ಕನ್ನೇ ಬದಲಿಸಿದರು.
17ನೇ ಓವರ್‌ನಲ್ಲಿ ಕೇವಲ 2 ರನ್ ನೀಡಿ ಹ್ಯಾಟ್ರಿಕ್ ವಿಕೆಟ್ ಸಹಿತ ನಾಲ್ಕು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಿಂಚಿದರು. Yuzvendra Chahal rr vs kkr match report in kannada